ಸ್ಕೀಯಿಂಗ್ನಲ್ಲಿ ಮೊದಲ ಅಂತರರಾಷ್ಟ್ರೀಯ ಪದಕ ಗೆದ್ದ ಆಂಚಲ್ ಠಾಕೂರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಭಾರತಕ್ಕೆ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪದಕ ಗೆದ್ದು ತಂದ ಆಂಚಲ್ ಠಾಕೂರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

Updated: Jan 10, 2018 , 04:20 PM IST
ಸ್ಕೀಯಿಂಗ್ನಲ್ಲಿ ಮೊದಲ ಅಂತರರಾಷ್ಟ್ರೀಯ ಪದಕ ಗೆದ್ದ ಆಂಚಲ್ ಠಾಕೂರ್ ಗೆ ಪ್ರಧಾನಿ ಮೋದಿ   ಅಭಿನಂದನೆ

ನವ ದೆಹಲಿ : ಭಾರತಕ್ಕೆ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪದಕ ಗೆದ್ದು ತಂದ ಆಂಚಲ್ ಠಾಕೂರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಇಡೀ ದೇಶವು ಆಕೆಯ "ಐತಿಹಾಸಿಕ ಸಾಧನೆ" ಯಿಂದ ಹೆಮ್ಮೆ ಪಡುವಂತಾಗಿದೆ ಎಂದಿದ್ದಾರೆ.

ಟರ್ಕಿಯಲ್ಲಿರುವ ಎರ್ಜುರಮ್ನ ಪಲಾಂಡೋಕೆನ್ ಸ್ಕೀ ಸೆಂಟರ್ನಲ್ಲಿ ಫೆಡರೇಶನ್ ಇಂಟರ್ನ್ಯಾಶನಲ್ ಡೆ ಸ್ಕೀ (ಫಿಸ್) ಸ್ಕೀಯಿಂಗ್ನ ಅಂತರರಾಷ್ಟ್ರೀಯ ಆಡಳಿತ ಮಂಡಳಿ ಆಯೋಜಿಸಿದ್ದ ಅಲ್ಪೈನ್ ಎಜೆಡರ್ 3200 ಕಪ್ನಲ್ಲಿ 21 ವರ್ಷ ವಯಸ್ಸಿನ ಆಂಚಲ್ ಠಾಕೂರ್ ಕಂಚಿನ ಪದಕ ಗೆದ್ದಿದ್ದಾರೆ.

"ಸ್ಕೀಯಿಂಗ್ನಲ್ಲಿ ಅಂತರರಾಷ್ಟ್ರೀಯ ಪದಕವನ್ನು ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ! ಟರ್ಕಿಯ ಫಿಸ್ ಇಂಟರ್ನ್ಯಾಷನಲ್ ಸ್ಕೀಯಿಂಗ್ ಸ್ಪರ್ಧೆಯಲ್ಲಿ ನಿಮ್ಮ ಐತಿಹಾಸಿಕ ಸಾಧನೆಯ ಬಗ್ಗೆ ಸಂಪೂರ್ಣ ರಾಷ್ಟ್ರವು ಮೋಹಕವಾಗಿದೆ. ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಬಯಸುತ್ತೀವೆ'' ಎಂದು ಮೋದಿ ಟ್ವೀಟ್ ಮಾಡುವ ಮೂಲಕ ಆಕೆಗೆ ಹಾರೈಸಿದ್ದಾರೆ.