ಅಂಬಟಿ ರಾಯ್ಡು ಅನುಮಾನಾಸ್ಪದ ಬೌಲಿಂಗ್ ಶೈಲಿ, 14 ದಿನಗಳಲ್ಲಿ ಪರೀಕ್ಷೆ ಸಾಧ್ಯತೆ

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ  ಭಾರತೀಯ ಕ್ರಿಕೆಟಿಗ ಅಂಬಾಟಿ ರಾಯಡು ಅವರು ಅನುಮಾನಸ್ಪದ ಬೌಲಿಂಗ್ ಶೈಲಿ ಕಾರಣಕ್ಕಾಗಿ 14 ದಿನಗಳಲ್ಲಿ ಪರೀಕ್ಷೆಗೆ ಒಳಗಾಗಬೇಕಾಗಿದೆ ಎಂದು ಐಸಿಸಿ ತಿಳಿಸಿದೆ.

Last Updated : Jan 13, 2019, 05:02 PM IST
ಅಂಬಟಿ ರಾಯ್ಡು ಅನುಮಾನಾಸ್ಪದ ಬೌಲಿಂಗ್ ಶೈಲಿ, 14 ದಿನಗಳಲ್ಲಿ ಪರೀಕ್ಷೆ ಸಾಧ್ಯತೆ title=

ನವದೆಹಲಿ: ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ  ಭಾರತೀಯ ಕ್ರಿಕೆಟಿಗ ಅಂಬಾಟಿ ರಾಯಡು ಅವರು ಅನುಮಾನಸ್ಪದ ಬೌಲಿಂಗ್ ಶೈಲಿ ಕಾರಣಕ್ಕಾಗಿ 14 ದಿನಗಳಲ್ಲಿ ಪರೀಕ್ಷೆಗೆ ಒಳಗಾಗಬೇಕಾಗಿದೆ ಎಂದು ಐಸಿಸಿ ತಿಳಿಸಿದೆ.

ಈ ಕುರಿತಾಗಿ ತನ್ನ ಪ್ರಕಟಿತ ಹೇಳಿಕೆಯಲ್ಲಿ ತಿಳಿಸಿರುವ ಐಸಿಸಿ "ರಾಯಡು ಅವರ ಬೌಲಿಂಗ್ ಶೈಲಿ  ಟೆಸ್ಟ್ ಏಕದಿನ ಹಾಗೂ ಟ್ವೆಂಟಿ ಕ್ರಿಕೆಟ್ ನಲ್ಲಿ ಈಗ ಪರಿಶೀಲನೆಯಲ್ಲಿದೆ,ಆದ್ದರಿಂದ ಅವರ ಬೌಲಿಂಗ್ ಶೈಲಿಯನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ತಿಳಿಸಿದೆ. ಬೌಲಿಂಗ್ ಪರೀಕ್ಷೆ ದೃಡಪಡುವವರೆಗೆ ಅವರು ಬೌಲಿಂಗ್ ಮಾಡಬಹುದಾಗಿದೆ. 

ಆದ್ಯಾಗೂ 33 ವರ್ಷದ ರಾಯಡು ಶನಿವಾರದಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಸಿಸ್ ವಿರುದ್ಧ ಪರಿಣಾಮಕಾರಿ ಎಣಿಸಿರಲಿಲ್ಲ. ಮೂಲತ ಆಂಧ್ರಪ್ರದೇಶದವರಾಗಿರುವ ಅಂಬಟಿ ರಾಯಡು ಇದುವರೆಗೆ 44 ಏಕದಿನ ಪಂದ್ಯಗಳನ್ನು ಆಡಿದ್ದಾರೆ.ಇದರಲ್ಲಿ ಅವರು 124 ರನ್ ಗಳಿಸಿರುವುದು ಅವರ ಶ್ರೇಷ್ಠ ಮೊತ್ತವಾಗಿದೆ.  

Trending News