ಚೆನ್ನೈ ನ ಅಂಬಟಿ ರಾಯಡು ಆರ್ಭಟಕ್ಕೆ ಅಪ್ಪಚ್ಚಾದ ಹೈದರಾಬಾದ್

    

Updated: May 13, 2018 , 08:37 PM IST
 ಚೆನ್ನೈ ನ ಅಂಬಟಿ ರಾಯಡು ಆರ್ಭಟಕ್ಕೆ ಅಪ್ಪಚ್ಚಾದ ಹೈದರಾಬಾದ್

ಪುಣೆ: ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ತಂಡವು ಹೈದರಾಬಾದ್ ತಂಡವನ್ನು 20 ಓವರ್ ಗಳಲ್ಲಿ 179 ಮೊತ್ತಕ್ಕೆ ಕಟ್ಟಿ ಹಾಕಿತು.

ಹೈದರಾಬಾದ್ ಪರ ಭರ್ಜರಿ ಬ್ಯಾಟಿಂಗ್ ಬೀಸಿದ ಶಿಖರ್ ಧವನ್ 49 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಗಳ ಮೂಲಕ 79 ರನ್ ಗಳಿಸಿದರು.ಇವರಿಗೆ ಸಾಥ್ ನೀಡಿದ  ಕೆನ್ ವಿಲಿಯಮ್ಸನ್ 51 ರನ್ ಗಳಿಸಿದರು.

180 ರನ್ ಗಳ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಅಂಬಟಿ ರಾಯಡು ಅವರ ಅಜೇಯ ಶತಕ (100) ಮತ್ತು ಶೇನ್ ವಾಟ್ಸನ್ ಅವರ ಅರ್ಧಶತಕ(57) ನೆರವಿನಿಂದ ಇನ್ನು ಒಂದು ಓವರ್ ಬಾಕಿ ಇರುವಂತೆ  ಗೆಲುವಿನ ಗುರಿ ತಲುಪಿತು.

By continuing to use the site, you agree to the use of cookies. You can find out more by clicking this link

Close