ಏಷ್ಯಾ ಕಪ್ 2018: ಭಾರತ-ಪಾಕ್ ಪಂದ್ಯ, ಭಾರತ ಗೆಲುವಿಗೆ 163 ರನ್ ಟಾರ್ಗೆಟ್

ಭಾರತ-ಪಾಕ್ ನಡುವಿನ ಪಂದ್ಯದಲ್ಲಿ  ಭಾರತ ಗೆಲುವಿಗೆ 163 ರನ್ ಗಳಿಸುವ ಅಗತ್ಯವಿದೆ.

Last Updated : Sep 19, 2018, 09:26 PM IST
ಏಷ್ಯಾ ಕಪ್ 2018: ಭಾರತ-ಪಾಕ್ ಪಂದ್ಯ, ಭಾರತ ಗೆಲುವಿಗೆ 163 ರನ್ ಟಾರ್ಗೆಟ್ title=

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ಭಾರತ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ 43.1 ಓವರ್'ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಪಾಕ್ ತಂಡ ಕೇವಲ 162 ರನ್ ಗಳಿಗೆ ತೃಪ್ತಿಪಡಬೇಕಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕ್ ತಂಡದಿಂದ ಆರಂಭದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಮಾಮ್ ಉಲ್ ಹಾಕ್ ಹಾಗೂ ಫಖಾರ್ ಜಮಾನ್ ಒಂದೆರಡು ರನ್'ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿ ಹಿಂತಿರುಗಿದರು. ಭಾರತದ ಭುವನೇಶ್ವರ್ ಕುಮಾರ್ ಮತ್ತು ಕೆದಾರ್ ಜಾಧವ್ ತಲಾ ಮೂರು ವಿಕೆಟ್ ಮತ್ತು ಜಸ್ ಪ್ರೀತ್ ಬೂಮ್ರಾ ಎರಡು ವಿಕೆಟ್ ಉರುಳಿಸಿ ಕಾಡಿದರು.
 

Trending News