ಆಷ್ಟ್ರೇಲಿಯಾ ಪ್ರವಾಸದ ವೇಳೆ ವಿನಯದಿಂದ ವರ್ತಿಸಲು ವಿರಾಟ್ ಕೊಹ್ಲಿಗೆ ಕಿವಿಮಾತು ಹೇಳಿದ ಬಿಸಿಸಿಐ

ಇತ್ತೀಚೆಗೆ ಆ್ಯಪ್‌ನಲ್ಲಿ ಅಭಿಮಾನಿಗಳೊಂದಿಗೆ ಚರ್ಚೆ ನಡೆಸುವ ವೇಳೆ ಅಭಿಮಾನಿಯೊಬ್ಬ ತಾನು ಭಾರತದ ಆಟಗಾರರಿಗಿಂತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಆಟವನ್ನು ನೋಡಲು ಇಷ್ಟ ಪಡುತ್ತೇನೆ' ಎಂದು ಹೇಳಿದ್ದರು. ಇದಕ್ಕೆ ಕೊಹ್ಲಿ ಸಿಟ್ಟಿಗೆದ್ದು ನೀವು ಭಾರತ ದೇಶದಲ್ಲಿರಲು ಅರ್ಹರಲ್ಲ ಎಂದು ಹೇಳಿಕೆ ನೀಡಿದ್ದರು.

Last Updated : Nov 17, 2018, 04:40 PM IST
ಆಷ್ಟ್ರೇಲಿಯಾ ಪ್ರವಾಸದ ವೇಳೆ ವಿನಯದಿಂದ ವರ್ತಿಸಲು ವಿರಾಟ್ ಕೊಹ್ಲಿಗೆ ಕಿವಿಮಾತು ಹೇಳಿದ ಬಿಸಿಸಿಐ title=

ನವದೆಹಲಿ: ಇತ್ತೀಚೆಗೆ ಆ್ಯಪ್‌ನಲ್ಲಿ ಅಭಿಮಾನಿಗಳೊಂದಿಗೆ ಚರ್ಚೆ ನಡೆಸುವ ವೇಳೆ ಅಭಿಮಾನಿಯೊಬ್ಬ ತಾನು ಭಾರತದ ಆಟಗಾರರಿಗಿಂತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಆಟವನ್ನು ನೋಡಲು ಇಷ್ಟ ಪಡುತ್ತೇನೆ' ಎಂದು ಹೇಳಿದ್ದರು. ಇದಕ್ಕೆ ಕೊಹ್ಲಿ ಸಿಟ್ಟಿಗೆದ್ದು ನೀವು ಭಾರತ ದೇಶದಲ್ಲಿರಲು ಅರ್ಹರಲ್ಲ ಎಂದು ಹೇಳಿಕೆ ನೀಡಿದ್ದರು.

ನಂತರ ಈ ಹೇಳಿಕೆ ಭಾರಿ ವಿವಾದ ಉಂಟು ಮಾಡಿತ್ತು. ಈ ಹಿನ್ನಲೆಯಲ್ಲಿ ಬಿಸಿಸಿಐನ ನಿರ್ವಹಣಾ ಸಮಿತಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯವರಿಗೆ ವಿನಯದಿಂದ ವರ್ತಿಸುವಂತೆ ಬುದ್ದಿಮಾತು ಹೇಳಿದೆ.

ಇದೇ ಬರುವ ನವಂಬರ್ 21 ರಿಂದ ಆಷ್ಟ್ರೇಲಿಯಾದ ವಿರುದ್ದ ಟ್ವೆಂಟಿ ಪಂದ್ಯ ಪ್ರಾರಂಭವಾಗಲಿದೆ ಈ ಹಿನ್ನಲೆಯಲ್ಲಿ ಕೊಹ್ಲಿಯವರಿಗೆ ಪ್ರವಾಸದ ವೇಳೆ ವಿನಯದಿಂದ ವರ್ತಿಸಲು ಬುದ್ದಿ ಮಾತು ಹೇಳಿದೆ ಎಂದು ತಿಳಿದು ಬಂದಿದೆ.ಈ ಕುರಿತಾಗಿ ಮಾಹಿತಿ ನೀಡಿರುವ ಸಿಇಒ ಸಿಬ್ಬಂಧಿಯು "ಆಷ್ಟ್ರೇಲಿಯಾ ಪ್ರವಾಸದ ವೇಳೆ ಮೀಡಿಯಾ ಹಾಗೂ ಅಲ್ಲಿನ ಜನರ ಜೊತೆ ಮಾತನಾಡುವ ವೇಳೆ ವಿನಯದಿಂದ ವರ್ತಿಸಲು ಅವರಿಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಧ್ಯ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ  ಭರ್ಜರಿ ಬ್ಯಾಟಿಂಗ್ ನಿಂದ ಗಮನ ಸೆಳೆಯುತ್ತಿರುವ ವಿರಾಟ್ ಕೊಹ್ಲಿ ಈಗ ಎಕದಿನದ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಗಳಿಸಿದವರ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

 

 

Trending News