ಕೊಹ್ಲಿ ಆಶಯದಂತೆ ಸಖಿಗೂ,ಹೆಂಡತಿಗೂ ವಿದೇಶಿ ಪ್ರವಾಸಕ್ಕೆ ಸಮ್ಮತಿ ಸಾಧ್ಯತೆ!

ಪತ್ನಿ ಹಾಗೂ ಸಖಿಯನ್ನು ವಿದೇಶಿ ಪ್ರವಾಸಗಳಲ್ಲಿ ಆಟಗಾರ ಜೊತೆಗೆ ಕರೆದುಕೊಂಡು ಹೋಗಲು ಕೋರಿಕೊಂಡಿದ್ದ ವಿರಾಟ್ ಕೊಹ್ಲಿ ಅವರ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Last Updated : Oct 17, 2018, 02:46 PM IST
ಕೊಹ್ಲಿ ಆಶಯದಂತೆ ಸಖಿಗೂ,ಹೆಂಡತಿಗೂ ವಿದೇಶಿ ಪ್ರವಾಸಕ್ಕೆ ಸಮ್ಮತಿ ಸಾಧ್ಯತೆ!  title=

ನವದೆಹಲಿ: ಪತ್ನಿ ಹಾಗೂ ಸಖಿಯನ್ನು ವಿದೇಶಿ ಪ್ರವಾಸಗಳಲ್ಲಿ ಆಟಗಾರರ ಜೊತೆಗೆ ಕರೆದುಕೊಂಡು ಹೋಗಲು ಕೋರಿಕೊಂಡಿದ್ದ ವಿರಾಟ್ ಕೊಹ್ಲಿ ಅವರ ಬೇಡಿಕೆಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಮೂಲಗಳು ಪ್ರಕಾರ, ವಿದೇಶಿ ಪ್ರವಾಸಗಳಲ್ಲಿ ಕ್ರಿಕೆಟಿಗರ ಹೆಂಡತಿ ಮತ್ತು ಗೆಳತಿಯರನ್ನು (WAG ಗಳು) ಜೊತೆಯಲ್ಲಿ ಕರೆದುಕೊಂಡುಹೋಗಲು ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದ ಕೋಹ್ಲಿಯ ಕೋರಿಕೆಗೆ ಬೋರ್ಡ್ ಒಪ್ಪಿಕೊಂಡಿದೆ ಎನ್ನಲಾಗಿದೆ.ಆದರೆ ಅಧಿಕೃತವಾಗಿ ಇದು ಇನ್ನು ಧೃಡಪಟ್ಟಿಲ್ಲ ಎಂದು ತಿಳಿದುಬಂದಿದೆ.

ಕೊಹ್ಲಿ, ಮುಖ್ಯ ತರಬೇತುದಾರ ರವಿ ಶಾಸ್ತ್ರಿ, ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಅವರನ್ನು ಒಳಗೊಂಡ ಸಮಿತಿಯ ನಿರ್ವಾಹಕ ಸಮಿತಿ (ಸಿಒಎ), ಬಿಸಿಸಿಐ ಆಯ್ಕೆದಾರರು ಸಮಿತಿ ಮತ್ತು ಇಂಡಿಯನ್ ಟೀಮ್ ಮ್ಯಾನೇಜ್ಮೆಂಟ್ ಒಳಗೊಂಡ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಸಲಾಗಿದೆ.ಅಲ್ಲದೆ ಈ ಸಭೆಯಲ್ಲಿ ಈ ವರ್ಷದ ತಂಡದ ಪ್ರದರ್ಶನದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ.

Trending News