ಟ್ವೆಂಟಿ ಪಂದ್ಯದಲ್ಲಿ ಶಿಖರ್ ಧವನ್ ಮಾಡಿದ ದಾಖಲೆ ಏನು ಗೊತ್ತಾ?

ಲಖನೌದಲ್ಲಿ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧ  2 ನೇ ಟ್ವೆಂಟಿ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ. ಹಾಗಾದರೆ ಅದೆನಂತೀರಾ? ಈಗ ಅವರು ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1000 ರನ್ ಗಳನ್ನು ಗಳಿಸಿದ ತಲುಪಿದ ಆರನೇಯ ಆಟಗಾರನೆನಿಸಿದ್ದಾರೆ.

Last Updated : Nov 6, 2018, 08:20 PM IST
ಟ್ವೆಂಟಿ ಪಂದ್ಯದಲ್ಲಿ ಶಿಖರ್ ಧವನ್ ಮಾಡಿದ ದಾಖಲೆ ಏನು ಗೊತ್ತಾ? title=

ನವದೆಹಲಿ: ಲಖನೌದಲ್ಲಿ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧ  2 ನೇ ಟ್ವೆಂಟಿ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ. ಹಾಗಾದರೆ ಅದೆನಂತೀರಾ? ಈಗ ಅವರು ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1000 ರನ್ ಗಳನ್ನು ಗಳಿಸಿದ ತಲುಪಿದ ಆರನೇಯ ಆಟಗಾರನೆನಿಸಿದ್ದಾರೆ.

ಈ ಪಂದ್ಯಕ್ಕೂ ಮೊದಲು ಧವನ್ 980 ರನ್ ಗಳನ್ನು ಗಳಿಸಿದ್ದ ಅವರು 1000 ರನ್ ಗಳಿಸಲು ಕೇವಲ 20 ರನ್ ಗಳ ಅವಶ್ಯಕತೆ ಇತ್ತು. ಈಗ ಅವರು 43 ಗಳಿಸುವ ಮೂಲಕ ಈ ಸಾಧನೆ ಮಾಡಿದರು. ಇದಕ್ಕೂ ಮೊದಲು ಭಾರತದ ಪರ ವಿರಾಟ್ ಕೊಹ್ಲಿ, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಮತ್ತು ಸಹ ಆಟಗಾರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಈ ದಾಖಲೆಯನ್ನು ಮಾಡಿದ್ದ ಆಟಗಾರರಾಗಿದ್ದರು. ಟಿ -20 ಕ್ರಿಕೆಟ್ನಲ್ಲಿ 1000 ರನ್ ಗಳನ್ನು ಭಾರತದ ಪರ ವೇಗವಾಗಿ ಗಳಿಸಿದ ಆಟಗಾರನೆಂದರೆ ವಿರಾಟ್ ಕೊಹ್ಲಿ.

ಇತ್ತೀಚೆಗೆ ಭಾರತದ ಪರ ಅತ್ಯುತ್ತಮ ಫಾರ್ಮ್ ನಲ್ಲಿರುವ  ಧವನ್ ಏಷ್ಯಾ ಕಪ್ನಲ್ಲಿ 342 ರನ್ ಗಳನ್ನು ಗಳಿಸುವ ಮೂಲಕ ಅಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

Trending News