ಕುಸ್ತಿ ಪಟು ಸುಶೀಲ್ ಕುಮಾರ್ ಮತ್ತು ಬೆಂಬಲಿಗರ ವಿರುದ್ಧ ದೂರು ದಾಖಲು

ಸುಶೀಲ್‌ ಕುಮಾರ್‌ ಅವರ ಬೆಂಬಲಿಗರು ಪ್ರವೀಣ್‌ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ   ಹಲ್ಲೆ ಮಾಡಿದ ಘಟನೆ ಸಂಬಂಧವಾಗಿ ದೆಹಲಿ ಪೊಲೀಸರು ಐಪಿಸಿ ಸೆ.323 ಮತ್ತು 341ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. 

Updated: Dec 30, 2017 , 05:00 PM IST
ಕುಸ್ತಿ ಪಟು ಸುಶೀಲ್ ಕುಮಾರ್ ಮತ್ತು ಬೆಂಬಲಿಗರ ವಿರುದ್ಧ ದೂರು ದಾಖಲು

ನವದೆಹಲಿ : ಕುಸ್ತಿಪಟು ಸುಶೀಲ್‌ ಕುಮಾರ್‌ ಅವರ ಬೆಂಬಲಿಗರು ಎದುರಾಳಿ ಕುಸ್ತಿಪಟು ಪ್ರವೀಣ್‌ ರಾಣಾ ಅವರ ಮೇಲೆ ಹಲ್ಲೆ ನಡೆಸಿದ ಒಂದು ದಿನದ ತರುವಾಯ ಇಂದು ದೆಹಲಿ ಪೊಲೀಸರು ಸುಶೀಲ್‌ ಕುಮಾರ್‌ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. 

ಸುಶೀಲ್‌ ಕುಮಾರ್‌ ಅವರ ಬೆಂಬಲಿಗರು ಪ್ರವೀಣ್‌ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ   ಹಲ್ಲೆ ಮಾಡಿದ ಘಟನೆ ಸಂಬಂಧವಾಗಿ ದಿಲ್ಲಿ ಪೊಲೀಸರು ಐಪಿಸಿ ಸೆ.323 ಮತ್ತು 341ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. 

ಎರಡು ಒಲಿಂಪಿಕ್ ಗಳ ಪದಕ ವಿಜೇತ ಸುಶೀಲ್‌ ಅವರ ಮುಂದಿನ ವರ್ಷದ ಕಾಮನ್ವೆಲ್ತ್‌ ಗೇಮ್ಸ್‌ಗೆ ಅರ್ಹತೆ ಪಡೆದ ಕುಸ್ತಿ ಪಂದ್ಯವು, ಸುಶೀಲ್‌ ಕುಮಾರ್‌ ಮತ್ತು ಎದುರಾಳಿ ಪ್ರವೀಣ್‌ ರಾಣಾ ಅವರ ಬೆಂಬಲಿಗರ ನಡುವೆ ಕಾಳಗವನ್ನೇ  ಕಂಡಿತು. 

ಕಾಮನ್ವೆಲ್ತ್‌ ಚಾಂಪ್ಯನ್‌ಶಿಪ್‌ ಚಿನ್ನದ ಪದಕವನ್ನು ಗೆದ್ದು ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಅಖಾಡೆಗೆ ಮರಳಿರುವ ಸುಶೀಲ್‌ ಕುಮಾರ್‌ 74 ಕೆಜಿ ವಿಭಾಗದಲ್ಲಿನ ಎಲ್ಲ ಸವಾಲುಗಳನ್ನು ಗೆದ್ದಿದ್ದಾರೆ.   

ಆದರೆ, ಸುಶೀಲ್‌ ಎದುರಿನ ಸೆಮಿ ಫೈನಲ್‌ ಪಂದ್ಯವನ್ನು ಎದುರಾಳಿ ಪ್ರವೀಣ್‌ ರಾಣಾ ಸೋತಾಗ ಅವರ ಅಭಿಮಾನಿ ಬೆಂಬಲಿಗರು ಸಂಯಮವನ್ನು ಕಳೆದುಕೊಂಡು ಸುಶೀಲ್‌ ಅಭಿಮಾನಿಗಳ ಮೇಲೆ ಕಾದಾಟಕ್ಕೆ ಹೋದರು ಎಂಬುದಾಗಿ ತಿಳಿದುಬಂದಿದೆ.