ವಿಶ್ವಕಪ್ ತಯಾರಿಗೆ ಹೊಸ ನಾಯಕನಿಗೆ ಸಮಯದ ಅಗತ್ಯವೆಂದು ನಾಯಕತ್ವ ತೊರದೆ- ಧೋನಿ

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ನಾಯಕತ್ವವನ್ನು ತೊರೆದದ್ದು ಮುಂಬರುವ ವಿಶ್ವಕಪ್ ಗೆ ಹೊಸ ನಾಯಕ ಸಜ್ಜಾಗಲು ಸಮಯ ಬೇಕು ಆ ಕಾರಣಕ್ಕಾಗಿ ನಾಯಕತ್ವದ ಹುದ್ದೆಯಿಂದ ಕೆಳಗಿಳಿದಿದ್ದು ಎಂದು ತಿಳಿಸಿದ್ದಾರೆ.

Updated: Sep 13, 2018 , 06:08 PM IST
ವಿಶ್ವಕಪ್ ತಯಾರಿಗೆ ಹೊಸ ನಾಯಕನಿಗೆ ಸಮಯದ ಅಗತ್ಯವೆಂದು ನಾಯಕತ್ವ ತೊರದೆ- ಧೋನಿ

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ನಾಯಕತ್ವವನ್ನು ತೊರೆದದ್ದು ಮುಂಬರುವ ವಿಶ್ವಕಪ್ ಗೆ ಹೊಸ ನಾಯಕ ಸಜ್ಜಾಗಲು ಸಮಯ ಬೇಕು ಆ ಕಾರಣಕ್ಕಾಗಿ ನಾಯಕತ್ವದ ಹುದ್ದೆಯಿಂದ ಕೆಳಗಿಳಿದಿದ್ದು ಎಂದು ತಿಳಿಸಿದ್ದಾರೆ.

ರಾಂಚಿಯಲ್ಲಿ ಸಿಐಎಸ್ಎಫ್  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ " ಹೊಸ ನಾಯಕನಿಗೆ  ಮುಂಬರುವ ವಿಶ್ವಕಪ್ ಗೆ ತಯಾರಿ ನಡೆಸಲು ಸಮಯ ಸಿಗಲಿ ಎನ್ನುವ ಕಾರಣಕ್ಕಾಗಿ ನಾನು ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದು ಎಂದು ಧೋನಿ ತಿಳಿಸಿದ್ದಾರೆ. ಶಕ್ತಿಶಾಲಿಯಾದ ತಂಡವನ್ನು ಆಯ್ಕೆ ಮಾಡಲು ನೂತನ ನಾಯಕನಿಗೆ ಸೂಕ್ತ ಸಮಯ ನೀಡದೆ ಇದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ, ಆದ್ದರಿಂದ ನಾನು ನಾಯಕತ್ವವನ್ನು ತೊರೆದೆ ಎಂದು ತಿಳಿಸಿದರು.  

ಇನ್ನು ಇತ್ತೀಚಿಗೆ ಇಂಗ್ಲೆಂಡ್ ನಲ್ಲಿನ ಭಾರತದ ವೈಫಲ್ಯಕ್ಕೆ ಪ್ರತಿಕ್ರಿಯಿಸಿದ ಧೋನಿ ಪ್ರಾಯೋಗಿಕ ಪಂದ್ಯಗಳನ್ನು ಪ್ರಾರಂಭದಲ್ಲಿ ಆಡದೆ ಇರುವುದರಿಂದ ತಂಡವು ಸೋಲಲು ಕಾರಣ ಎಂದು ತಿಳಿಸಿದರು.

By continuing to use the site, you agree to the use of cookies. You can find out more by clicking this link

Close