ವೆಸ್ಟ್ ಇಂಡೀಸ್ ವಿರುದ್ದ ಭಾರತಕ್ಕೆ 224 ರನ್ ಅಂತರದ ಗೆಲುವು

ಭಾರತ ನೀಡಿದ 378 ರನ್ ಗಳ ಸವಾಲನ್ನು ಬೆನ್ನತ್ತಿದ ವೆಸ್ಟ್ ಇಂಡಿಸ್ ತಂಡವು  153 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಳ್ಳುವುದರ ಮೂಲಕ 224 ರನ್ ಅಂತರದ ಸೋಲನ್ನು ಅನುಭವಿಸಿದೆ. 

Last Updated : Oct 29, 2018, 09:03 PM IST
ವೆಸ್ಟ್ ಇಂಡೀಸ್ ವಿರುದ್ದ ಭಾರತಕ್ಕೆ 224 ರನ್ ಅಂತರದ ಗೆಲುವು title=
Photo:twitter

ಮುಂಬಯಿ: ಭಾರತ ನೀಡಿದ 378 ರನ್ ಗಳ ಸವಾಲನ್ನು ಬೆನ್ನತ್ತಿದ ವೆಸ್ಟ್ ಇಂಡಿಸ್ ತಂಡವು 153 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಳ್ಳುವುದರ ಮೂಲಕ 224 ರನ್ ಅಂತರದ ಸೋಲನ್ನು ಅನುಭವಿಸಿದೆ. 

ಭಾರತದ ಬೃಹತ್ ಸವಾಲನ್ನು ಬೆನ್ನತ್ತಿದ ವಿಂಡಿಸ್ ತಂಡವು ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಸಿಲುಕಿ 21 ಓವರ್ ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಭಾರತದ ಪರ ಕುಲದೀಪ್ ಯಾದವ್ ಖಾಲಿಲ್ ಅಹಮದ್ ತಲಾ ಮೂರು ವಿಕೆಟ್ ಪಡೆಯುವುದರ ಮೂಲಕ ವಿಂಡಿಸ್ ತಂಡದ ಸರ್ವ ಪತನಕ್ಕೆ ಕಾರಣರಾದರು.ವಿಂಡಿಸ್ ತಂಡದ ಪರ ಜಾಸನ್ ಹೋಲ್ಡರ್ ಅವರು ಅರ್ಧ ಶತಕವನ್ನು(54) ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ 20 ರ ಗಡಿ ದಾಟುವಲ್ಲಿ ವಿಫಲರಾದರು.

ಇನ್ನೊಂದೆಡೆ ಭಾರತ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ರೋಹಿತ್ ಶರ್ಮಾ (162) ಮತ್ತು ಅಂಬಟಿ ರಾಯ್ಡು (100) ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್ ಗಳಲ್ಲಿ 377 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು.

Trending News