ಭಾರತ ತಂಡವು ಡೇಲ್ ಸ್ಟೈನ್ ಗೆ ಹೆದರಿಲ್ಲ - ಮೊಹಮ್ಮದ್ ಸಮೀ

      

Updated: Dec 28, 2017 , 03:07 PM IST
ಭಾರತ ತಂಡವು ಡೇಲ್ ಸ್ಟೈನ್ ಗೆ ಹೆದರಿಲ್ಲ - ಮೊಹಮ್ಮದ್ ಸಮೀ

ನವದೆಹಲಿ: ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡವು ಈ ಬಾರಿ ಗೆಲುವಿನ ಹುಮ್ಮಸ್ಸಿನೊಂದಿಗೆ ತೆರಳಿದೆ.ಈ ಹಿಂದೆ ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ.

ಆದರೆ ಈ ಭಾರಿ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ತಂಡದ ಸಾಮರ್ಥ್ಯದ ಬಗ್ಗೆ ಪರಿಕ್ರಯಿಸಿದ ಮೊಹಮ್ಮದ್ ಸಮೀ ನಾವು ನಮ್ಮ ನೂರರಷ್ಟು ಸಾಮರ್ಥ್ಯವನ್ನು ಪಣಕ್ಕಿಡಲು ಇಚ್ಚಿಸುತ್ತೇವೆ ಸ್ಟೆನ್ ಆಗಲಿ ಇನ್ನಿತರು ಏನೇ ಹೇಳಲಿ ನಾವು ಅದಕ್ಕೆ ಹೆದರುವ ಅಗತ್ಯವಿಲ್ಲ. ಕಳೆದ ಕೆಲವು ವರ್ಷಗಳಿಂದ ಭಾರತ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ, ಅದೇ ರೀತಿಯ ಪ್ರದರ್ಶನವನ್ನು ನಾವು ಈ ಟೂರ್ನಿಯಲ್ಲಿಯೂ ನೀಡುತ್ತೇವೆ ಎಂದರು.  

ಶಮಿ ಈ ದಕ್ಷಿಣ ಆಫ್ರಿಕಾದ ಟೂರ್ನಿಯಲ್ಲಿ ಐದನೆಯ ಬೌಲರ್ ಆಗಿ ಕಣಕ್ಕಿಳಿಯಲಿದ್ದಾರೆ. ಇಶಾಂತ್ ಶರ್ಮಾ, ಭುವನೇಶ್ವರ ಕುಮಾರ್, ಉಮೇಶ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಂಡದಲ್ಲಿರುತ್ತಾರೆ. ದಕ್ಷಿಣ ಆಫ್ರಿಕಾದ ಪಿಚ್ ಗಳು ಹೆಚ್ಚಾಗಿ ವೇಗದ ಬೌಲರ್ ಗಳಿಗೆ ನೆರವಾಗುವುದರಿಂದ ಐದು ಬೌಲರ್ ಗಳನ್ನು ಕಣಕ್ಕಿಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.