ಪಂಜಾಬ್ ವಿರುದ್ದ ಕೊಲ್ಕತ್ತಾಗೆ 31 ರನ್ ಗಳ ಜಯ

   

Updated: May 12, 2018 , 10:47 PM IST
 ಪಂಜಾಬ್ ವಿರುದ್ದ ಕೊಲ್ಕತ್ತಾಗೆ 31 ರನ್ ಗಳ ಜಯ

ಇಂದೋರ್: ಇಲ್ಲಿನ ಹೊಲ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ದುಕೊಂಡಿತು.

ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಕೋಲ್ಕತ್ತಾ ತಂಡವು ನರೈನ್ (75) ಮತ್ತು ಕಾರ್ತಿಕ್( 50) ಅರ್ಧ ಶತಕದ ನೆರವಿನಿಂದಾಗಿ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಭರ್ಜರಿ 245 ರನ್ ಗಳಿಸಿತು.

ಈ ಗೆಲುವಿನ ಗುರಿ ಬೆನ್ನತ್ತಿದ  ಪಂಜಾಬ್ ತಂಡವು ಸಹಿತ ಉತ್ತಮ ಆರಂಭವನ್ನೇ ಪ್ರಾರಂಭಿಸಿತು. ಪಂಜಾಬ್ ಪರ ಕನ್ನಡಿಗ  ಕೆ ಎಲ್ ರಾಹುಲ್ ರವರ (66) ಅರ್ಧಶತಕ  ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿತು. ಇವರ ನಂತರ ಆರ್ ಆಶ್ವಿನ್ (45) ಉತ್ತಮ ಹೋರಾಟ ನಡೆಸಿದರು.ಇದರ ಫಲವಾಗಿ 20 ಓವರ್ ಗಳಲ್ಲಿ  8 ವಿಕೆಟ್ ಕಳೆದುಕೊಂಡು  214 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಉತ್ತಮ ಹೋರಾಟ ನೀಡುವಲ್ಲಿ ಯಶಸ್ವಿಯಾದರೂ ಸಹಿತ 31 ರನ್ ಗಳ ಸೋಲು ಅನುಭವಿಸಿತು.  

By continuing to use the site, you agree to the use of cookies. You can find out more by clicking this link

Close