ಝೀವಾ ಜೊತೆ 'ಮಣ್ಣಲ್ಲಿ' ಮಹಿ ಆಟ!

ಚೆನ್ನೈ ಬೀಚ್‌ನಲ್ಲಿ ಮಗಳೊಂದಿಗೆ ಮಹೇಂದ್ರ ಸಿಂಗ್ ವಿಡಿಯೋ...

Last Updated : Jan 1, 2019, 03:47 PM IST
ಝೀವಾ ಜೊತೆ 'ಮಣ್ಣಲ್ಲಿ' ಮಹಿ ಆಟ! title=

ಚೆನ್ನೈ: ಭಾರತ ತಂಡದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮಗಳು ಝೀವಾ ಜೊತೆಗೆ ಚೆನ್ನೈ ಬೀಚ್‌ನಲ್ಲಿ ಏನ್ ಮಾಡ್ತಿದಾರೆ ಗೊತ್ತಾ...

ಇತ್ತೀಚೆಗಷ್ಟೇ ಧೋನಿ ಕುಟುಂಬ ಸಮೇತರಾಗಿ ಚೆನ್ನೈ ಬೀಚ್‌ಗೆ ತೆರಳಿದ್ದರು. ಈ ವೇಳೆ ಝೀವಾಳೊಂದಿಗೆ ಮರಳಿನಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿದ್ದರು. ಈ ದೃಶ್ಯವನ್ನು ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಧೋನಿಗೆ ದೇಶದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಆದರೆ ಧೋನಿಗಿರುವಷ್ಟೇ ಅಭಿಮಾನಿ ಬಳಗವನ್ನು ಧೋನಿ ಪುತ್ರಿ ಝೀವಾ ಕೂಡಾ ಹೊಂದಿದ್ದಾರೆ.

ಚೆನ್ನೈ ಬೀಚ್‌ನಲ್ಲಿ ಮಗಳು ಝೀವಾ ಜೊತೆಗೆ ಮಹೇಂದ್ರ ಸಿಂಗ್ ಮರಳಿನಲ್ಲಿ ಆಟ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.

 
 
 
 

 
 
 
 
 
 
 
 
 

As a kid whenever v got sand this was one thing v would do for sure

A post shared by M S Dhoni (@mahi7781) on

 

Trending News