Video:ಒಂದೇ ಓವರ್ ನಲ್ಲಿ 74 ರಿಂದ 100ಕ್ಕೆ ಜಿಗಿದ ಮುರಳಿ ವಿಜಯ್..!

 ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ XI ವಿರುದ್ಧ ನಡೆದ ನಾಲ್ಕು ದಿನದ ಅಭ್ಯಾಸ ಪಂದ್ಯದಲ್ಲಿ  ಮೊದಲು ಟೆಸ್ಟ್ ಪ್ರಾರಂಭವಾಗುವುದಕ್ಕೂ ಮುಂಚೆ ಅದ್ಬುತ ಶತಕವನ್ನು ಗಳಿಸಿದರು.

Last Updated : Dec 2, 2018, 12:06 PM IST
Video:ಒಂದೇ ಓವರ್ ನಲ್ಲಿ 74 ರಿಂದ 100ಕ್ಕೆ ಜಿಗಿದ ಮುರಳಿ ವಿಜಯ್..! title=

ನವದೆಹಲಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ XI ವಿರುದ್ಧ ನಡೆದ ನಾಲ್ಕು ದಿನದ ಅಭ್ಯಾಸ ಪಂದ್ಯದಲ್ಲಿ  ಮೊದಲು ಟೆಸ್ಟ್ ಪ್ರಾರಂಭವಾಗುವುದಕ್ಕೂ ಮುಂಚೆ ಮುರಳಿ ವಿಜಯ್ ಅದ್ಬುತ ಶತಕವನ್ನು ಗಳಿಸಿದರು.

ಅಚ್ಚರಿ ಎಂದರೆ ಪೃಥ್ವಿ ಶಾ ಗಾಯಗೊಂಡ ಕಾರಣ ಬ್ಯಾಟಿಂಗ್ ಗೆ ಇಳಿದ ಮುರಳಿ ವಿಜಯ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಉತ್ತಮ ಪ್ರದರ್ಶನ ನೀಡಿದರು.ಒಟ್ಟು 16 ಬೌಂಡರಿ ಐದು ಸಿಕ್ಸರ್ ಗಳನ್ನು ಬಾರಿಸುವುದರ ಮೂಲಕ 129 ರನ್ ಗಳಿಸಿದರು. ಇದರಲ್ಲಿ ಒಂದು ಓವರ್ ಮಾತ್ರ ಅವರಿಗೆ ಶತಕವನ್ನೇ ಸುಲಭವಾಗಿ ಗಳಿಸಲು ನೆರವಾಯಿತು. 

ಜೆಕ್ ಕಾರ್ಡರ್ ಬೌಲಿಂಗ್ ನಲ್ಲಿ ಅವರು 39 ನೇ ಓವರ್ ನಲ್ಲಿ ಬರೋಬ್ಬರಿ 26 ರನ್ ಗಳಿಸುವುದರ ಮೂಲಕ ಶತಕವನ್ನು ಗಳಿಸಿದರು.ಈ ಓವರ್ ಗೂ ಮುನ್ನ 74 ರನ್ ಗಳಿಸಿದ್ದ ಅವರು ನಂತರ 100 ರನ್ ಪೂರೈಸಿದರು

Trending News