VIDEO: ಗರ್ಭಿಣಿಯಾದರೂ ಟೆನ್ನಿಸ್ ಬಿಡದ ಸಾನಿಯಾ ಮಿರ್ಜಾ!

ಸಾನಿಯಾ ಮಿರ್ಜಾ ಗರ್ಭಿಣಿಯಾದ ನಂತರ ಹಲವಾರು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

Updated: Aug 9, 2018 , 05:18 PM IST
VIDEO: ಗರ್ಭಿಣಿಯಾದರೂ ಟೆನ್ನಿಸ್ ಬಿಡದ ಸಾನಿಯಾ ಮಿರ್ಜಾ!

ನವದೆಹಲಿ: ಭಾರತದ ಟೆನಿಸ್ ಸೂಪರ್ಸ್ಟಾರ್ ಸಾನಿಯಾ ಮಿರ್ಜಾ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಈ ಬಾರಿ ಸಾನಿಯಾ ಮಿರ್ಜಾ ತನ್ನ ಆಟದಿಂದಲ್ಲ ಅವರ Instagramನಲ್ಲಿ ಶೇರ್ ಮಾಡಿರುವ ವೀಡಿಯೋ ಮತ್ತು ಫೋಟೋಗಳ ಕಾರಣದಿಂದ ಚರ್ಚೆಯಲ್ಲಿದ್ದಾರೆ. ಗರ್ಭಿಣಿಯಾದ ನಂತರ ಸಾನಿಯಾ ತನ್ನ ಅಧಿಕೃತ Instagram ನಿಂದ ಅನೇಕ ವೀಡಿಯೊಗಳನ್ನು ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸಾನಿಯಾ ಅಭಿಮಾನಿಗಳು ಅದಕ್ಕೆ ಬಹಳ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. 

ಗರ್ಭಿಣಿಯಾದ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿರುತ್ತದೆ. ಸಾನಿಯಾ ಅವರ ಪ್ರಸವಕ್ಕೆ ಇನ್ನು ಎರಡೇ ತಿಂಗಳು ಬಾಕಿ ಇದೇ. ಆದರೆ ಸಾನಿಯಾ ವಿಶ್ರಾಂತಿ ತೆಗೆದುಕೊಳ್ಳುವ ಬದಲು ಟೆನ್ನಿಸ್ ಆಡುತ್ತಿದ್ದಾರೆ. ನೀವು ಟೆನ್ನಿಸ್ ಆಟಗಾರನನ್ನು ಟೆನ್ನಿಸ್ ಕೋರ್ಟ್ ನಿಂದ ದೂರವಿರಿಸಬಹುದು. ಆದರೆ, ಆಟಗಾರನೊಳಗಿಂದ ಟೆನ್ನಿಸ್ ಅನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸಾನಿಯಾ ಮಿರ್ಜಾ ತನ್ನ Instagram ಪೋಸ್ಟ್ನಲ್ಲಿ ಬರೆದಿದ್ದಾರೆ.

ಸಾನಿಯಾ ಮಿರ್ಜಾ ಗರ್ಭಿಣಿಯಾದ ನಂತರ ಹಲವಾರು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಟೆನ್ನಿಸ್ ಕೋರ್ಟ್ ವಿಡಿಯೋ ಮತ್ತು ಫೋಟೋಗಳನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.

By continuing to use the site, you agree to the use of cookies. You can find out more by clicking this link

Close