ಪದಾರ್ಪಣೆ ಪಂದ್ಯದಲ್ಲೇ ಪೃಥ್ವಿ 'ಶಾ'ನ್‌ದಾರ್ ಶತಕ

ಪೃಥ್ವಿಯನ್ನು ಭವಿಷ್ಯದ ಸಚ್ಚಿನ್ ಎಂದೇ ಕರೆಯಲಾಗುತ್ತಿದೆ.

Yashaswini V Yashaswini V | Updated: Oct 4, 2018 , 01:06 PM IST
ಪದಾರ್ಪಣೆ ಪಂದ್ಯದಲ್ಲೇ ಪೃಥ್ವಿ 'ಶಾ'ನ್‌ದಾರ್ ಶತಕ
Pic: PTI

ರಾಜ್‌ಕೋಟ್‌: ಟೆಸ್ಟ್ ಕ್ರಿಕೆಟ್‌ಗೆ 18ರ ಹರೆಯದ ಪೃಥ್ವಿ ಶಾ ಭರ್ಜರಿ ಪದಾರ್ಪಣೆ ಮಾಡಿದ್ದು, ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಪೃಥ್ವಿ ಶಾ ಅಮೋಘ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಮುಂಬೈನ ಪೃಥ್ವಿ ಶಾ ಶತಕ ಸಿಡಿಸಿ ಮಿಂಚಿದ್ದಾರೆ.

99 ಎಸೆತಗಳಲ್ಲಿ ಪೃಥ್ವಿ ಶತಕ:
ವೆಸ್ಟ್‌ಇಂಡೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ 56 ಎಸೆತಗಳಲ್ಲಿ ಅರ್ಧಶತಕ ಗಳಿಸಿ  ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ಅತಿ ಕಿರಿಯ ಭಾರತೀಯ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಪಾತ್ರವಾಗಿದ್ದ ಪೃಥ್ವಿ ಶಾ, ಆನಂತರವೂ ವೆಸ್ಟ್‌ಇಂಡೀಸ್ ಬೌಲರ್‌ಗಳ ಬೆವರಿಳಿಸಿ 99 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಡೆಬ್ಯು ಪಂದ್ಯದಲ್ಲೇ ಶತಕ ಬಾರಿಸಿದ 15ನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ. 

INDvsWI: ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಪೃಥ್ವಿ ಶಾ ದಾಖಲೆ