2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕುಸ್ತಿ ಪ್ರತಿನಿಧಿಸಲಿರುವ ಸಾಕ್ಷಿ ಮಲಿಕ್, ಬಬಿತಾ

     

Updated: Dec 31, 2017 , 07:05 PM IST
2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕುಸ್ತಿ ಪ್ರತಿನಿಧಿಸಲಿರುವ ಸಾಕ್ಷಿ ಮಲಿಕ್, ಬಬಿತಾ
ಸಾಕ್ಷಿ ಮಲಿಕ್ (ಪಿಟಿಐ)

ಲಕ್ನೋ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ಮುಂದಿನ ವರ್ಷ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ಭಾರತದ ಮಹಿಳಾ ಕುಸ್ತಿ ತಂಡದಲ್ಲಿ ಒಲಿಂಪಿಕ್ ಕಂಚಿನ ಪದಕ ವಿಜೇತ ಸಾಕ್ಷಿ ಮಲಿಕ್  ಶನಿವಾರ ಆಯ್ಕೆಯಾಗಿದ್ದಾರೆ.

ಸಾಕ್ಷಿ (62 ಕೆಜಿ) ಹೊರತುಪಡಿಸಿ, 2018 ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ತಮ್ಮ ಸೀಟ್ ಗಳನ್ನು ಬುಕ್ ಮಾಡಿರುವ ಇತರ ಮಹಿಳಾ ಕುಸ್ತಿಪಟುಗಳೆಂದರೆ ವಿನೆಶ್ ಫೋಗಾಟ್ (50 ಕೆಜಿ), ಬಾಬಿತಾ ಕುಮಾರಿ (54 ಕೆಜಿ), ಪೂಜಾ ಧಂಡಾ (57 ಕೆಜಿ), ದಿವ್ಯ ಕರಣ್ (68 ಕೆಜಿ) ಮತ್ತು ಕಿರಣ್ (76 ಕೆಜಿ). ಇಲ್ಲಿನ ಭಾರತೀಯ  ಕ್ರೀಡಾ ಪ್ರಾಧಿಕಾರದ  ತರಬೇತಿ ಕೇಂದ್ರದಲ್ಲಿ  ಆರು  ವಿಭಾಗಗಳಲ್ಲಿ ಆಯ್ಕೆ ನಡೆಯಿತು.

ಆರು ಫ್ರೀಸ್ಟೈಲ್ ಕುಸ್ತಿಪಟುಗಳು 2018 ರ ಹಿರಿಯ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಬಿರ್ಕೆಕ್, ಕಿರ್ಗಿಸ್ತಾನ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

By continuing to use the site, you agree to the use of cookies. You can find out more by clicking this link

Close