ಭಾರತ ತಂಡದ ಉತ್ತಮ ಪ್ರದರ್ಶನಕ್ಕೆ ಟಿಪ್ಸ್ ನೀಡಿದ ಸಚಿನ್ ತೆಂಡೂಲ್ಕರ್

      

Last Updated : Jan 13, 2018, 04:36 PM IST
ಭಾರತ ತಂಡದ ಉತ್ತಮ ಪ್ರದರ್ಶನಕ್ಕೆ ಟಿಪ್ಸ್ ನೀಡಿದ ಸಚಿನ್ ತೆಂಡೂಲ್ಕರ್ title=
Photo Courtesy: PTI

ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶನಿವಾರದಂದು ಸೆಂಚುರಿಯನ್ ಟೆಸ್ಟ್ನಲ್ಲಿ  ಎರಡನೇ ಟೆಸ್ಟ್ ಪಂದ್ಯದ ಆಟ ಆರಂಭಿಸಿರುವ ಭಾರತ ತಂಡಕ್ಕೆ ಸುಧಾರಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ತಮ್ಮ ಕ್ರಿಕೆಟ್ ದಿನಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸಚಿನ್ ಸಾಕಷ್ಟು ರನ್ಗಳನ್ನು ಗಳಿಸಿದ್ದಾರೆ. ಆದ್ದರಿಂದ ವಿರಾಟ್ ಕೊಹ್ಲಿ ನೇತೃತ್ವದ ತಂಡ ಅವರ ಸಲಹೆಯ ಬಗ್ಗೆ ಗಮನ ಹರಿಸಬೇಕಾಗಿದೆ. ಕಾರಣ ವಿಷ್ಟೇ ಇತ್ತೀಚೆಗೆ ಕೇಪ್ ಟೌನ್ನಲ್ಲಿರುವ ನ್ಯೂಲ್ಯಾಂಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತದ 72 ರನ್ಗಳ ಹೀನಾಯ ಸೋಲನ್ನು ಅನುಭವಿಸಿತ್ತು, ಈ ಹಿನ್ನಲೆಯಲ್ಲಿ  ಸಚಿನ್ ಅವರು ತಂಡಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಹಿಂದೂಸ್ಥಾನ್ ಟೈಮ್ಸ್ಗೆ ನೀಡಿದ ಸಂದರ್ಶನವೊಂದರಲ್ಲಿ, ಸಚಿನ್ ತೆಂಡೂಲ್ಕರ್ ಮಾತನಾಡುತ್ತಾ "ಬ್ಯಾಟ್ಸ್ಮನ್ಗಳು ಮೊದಲ 25 ಓವರ್ಗಳಲ್ಲಿ ಗಮನವನ್ನು ಕೇಂದ್ರೀಕರಿಸಬೇಕು ಮತ್ತು 50ರ ನಂತರ ರನ್ನ ಗತಿಯ ವೇಗಕ್ಕೆ ಒತ್ತು ನೀಡಬೇಕು ಎಂದರು. ಬೌಲರ್ಗಳು ಸಮಯಕ್ಕನುಗುಣವಾಗಿ ಸರಿಯಾದ ಪ್ರದೇಶದಲ್ಲಿ ಬೌಲ್ ಮಾಡಬೇಕು ಜೊತೆಗೆ ಹೆಚ್ಚು ತಂಡವು ಧನಾತ್ಮಕವಾಗಿ ಚಿಂತಿಸಬೇಕು" ಎಂದು ಸಲಹೆ ನೀಡಿದ್ದಾರೆ. 

Trending News