ಅಂಡರ್-19 ವಿಶ್ವಕಪ್ ವಿಜೇತ ತಂಡಕ್ಕೆ ಅದ್ಧೂರಿ ಸ್ವಾಗತ

    

Manjunath Naragund Manjunath Naragund | Updated: Feb 5, 2018 , 05:04 PM IST
ಅಂಡರ್-19 ವಿಶ್ವಕಪ್ ವಿಜೇತ ತಂಡಕ್ಕೆ ಅದ್ಧೂರಿ ಸ್ವಾಗತ
Photo Courtesy: Twitter

ಮುಂಬೈ:  ಭಾರತ ಕಿರಿಯರ ಕ್ರಿಕೆಟ್ ತಂಡ ಇತ್ತೀಚಿಗೆ ಆಷ್ಟ್ರೇಲಿಯಾ ತಂಡವನ್ನು ಅಂಡರ್- 19 ವಿಶ್ವಕಪ್ ನಲ್ಲಿ ಮಣಿಸಿ ಟ್ರೋಪಿ ಗೆದ್ದು  ಇಂದು ಸ್ವದೇಶಕ್ಕೆ ಆಗಮಿಸಿದ ಭಾರತ ತಂಡಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಹಿರಿಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ನಾಯಕತ್ವದ ಪೃಥ್ವಿ ಶಾ ನೇತೃತ್ವದ ಭಾರತೀಯ ತಂಡವನ್ನು ಬರಮಾಡಿಕೊಂಡರು. ತಂಡದ  ಆಟಗಾರರು ಕೋಚ್ ರಾಹುಲ್ ದ್ರಾವಿಡ್ ವಿಮಾನ ನಿಲ್ದಾಣದಿಂದ  ಸಂಜೆ 3.30 ರ ಹೊತ್ತಿಗೆ ಹೊರಬಂದರು. ಎಂಸಿಎ ಅಧಿಕಾರಿಗಳ ಜೊತೆಗೆ, ಯುವ ನಾಯಕರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು.

ಈ ಕಿರಿಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವು ಕೊನೆವರೆಗೂ ಸೋಲದೆ ಉತ್ತಮ ಪ್ರದರ್ಶನವನ್ನು ನೀಡಿತು.ಆ ಮೂಲಕ ನ್ಯೂಝಿಲೆಂಡ್ನಲ್ಲಿ ನಾಲ್ಕನೇ ಬಾರಿ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಿತು.