Video:ಸರಣಿ ಗೆಲುವಿನ ನಂತರ ಪತ್ನಿ ಅನುಷ್ಕಾಳೊಂದಿಗೆ ಗೆಲುವಿನ ಹೆಜ್ಜೆ ಹಾಕಿದ ಕೊಹ್ಲಿ!

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ನಡೆದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಗೆಲುವು ಸಾಧಿಸಿದೆ. 

Last Updated : Jan 7, 2019, 01:51 PM IST
Video:ಸರಣಿ ಗೆಲುವಿನ ನಂತರ ಪತ್ನಿ ಅನುಷ್ಕಾಳೊಂದಿಗೆ ಗೆಲುವಿನ ಹೆಜ್ಜೆ ಹಾಕಿದ ಕೊಹ್ಲಿ! title=
Photo courtesy: Twitter

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ನಡೆದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಗೆಲುವು ಸಾಧಿಸಿದೆ. 

ವಿಶೇಷವೆಂದರೆ ಈಗ ವಿರಾಟ್ ಕೊಹ್ಲಿ ಗೆಲುವು ಸಾಧಿಸಿದ ನಂತರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೈದಾನದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

ನಾಲ್ಕನೇ ಪಂದ್ಯದಲ್ಲಿ ಫಾಲೋ ಆನ್ ಮೂಲಕ ಬ್ಯಾಟಿಂಗ್ ಆರಂಭಿಸಿದ್ದ ಆಸಿಸ್ ತಂಡಕ್ಕೆ ಮಳೆ ಕಾರಣದಿಂದಾಗಿ ಪಂದ್ಯ ರದ್ದಾಯಿತು.ಇದಕ್ಕೂ ಮೊದಲು ಆಗಲೇ ಸರಣಿಯಲ್ಲಿ 2-1 ರ ಅಂತರದಲ್ಲಿ ಮುನ್ನಡೆ ಸಾಧಿಸಿದ್ದ ಭಾರತ ತಂಡವು ಸರಣಿಯನ್ನು ವಶಪಡಿಸಿಕೊಂಡಿತು.

ಸರಣಿ ಗೆಲುವಿನ ನಂತರ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿರುವುದು ವಿಶ್ವಕಪ್ ಗೆದ್ದಿರುವುದಕ್ಕಿಂತಲೂ ಮಹತ್ವದ್ದು ಎಂದರು. ಭಾರತ 71 ವರ್ಷಗಳಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿಯೊಂದರಲ್ಲಿ ಗೆಲುವು ಸಾಧಿಸಿದೆ.

ಈ ಸರಣಿಯಲ್ಲಿ ಭಾರತದ ಚೇತೆಶ್ವರ್ ಪೂಜಾರ್ ಅವರು ಮೂರು ಶತಕಗಳೊಂದಿಗೆ ಒಟ್ಟು 521 ರನ್ ಗಳಿಸಿದರು.ಇನ್ನೊಂದೆಡೆ ಭಾರತದ ಬೌಲರ್ ಜಸ್ಪ್ರಿತ್ ಬೂಮ್ರಾ  21 ವಿಕೆಟ್ ಕಬಳಿಸುವ ಮೂಲಕ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

.

.

Trending News