T10 Cricket League: ಚಾಂಪಿಯನ್ ಪಟ್ಟಕ್ಕೇರಿದ ZEE5 ಪ್ರಾಯೋಜಿತ ನಾರ್ದನ್ ವಾರಿಯರ್ಸ್

ಇದು T-10 ಕ್ರಿಕೆಟ್ ಲೀಗ್ನ ಎರಡನೇ ಆವೃತ್ತಿಯಾಗಿದೆ. ZEE5 ಪ್ರಾಯೋಜಿತ ನಾರ್ದನ್ ವಾರಿಯರ್ಸ್ ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಂಡು, ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

Updated: Dec 3, 2018 , 07:47 AM IST
T10 Cricket League: ಚಾಂಪಿಯನ್ ಪಟ್ಟಕ್ಕೇರಿದ ZEE5 ಪ್ರಾಯೋಜಿತ ನಾರ್ದನ್ ವಾರಿಯರ್ಸ್
PIC: @T10League

ಶಾರ್ಜಾ: T-10 ಕ್ರಿಕೆಟ್ ಲೀಗ್ ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದ ZEE5- ಪ್ರಾಯೋಜಿತ ನಾರ್ದನ್ ವಾರಿಯರ್ಸ್ ತಂಡವು  ಪಾಕ್ತೂನ್ಸ್ ತಂಡವನ್ನು ಮಣಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದು, ಚಾಂಪಿಯನ್ ಪಟ್ಟಕ್ಕೇರಿದೆ. 

ಡಿಸೆಂಬರ್ 2(ಭಾನುವಾರದಂದು) ನಡೆದ ಅತ್ಯಾಕರ್ಷಕ ಅಂತಿಮ ಪಂದ್ಯದಲ್ಲಿ ಫಾಕ್ತೋನ್ಸ್ ತಂಡವನ್ನು 22 ರನ್ ಗಳಿಂದ ಮಣಿಸಿತು. ZEE5 ಪ್ರಾಯೋಜಿತ ನಾರ್ದನ್ ವಾರಿಯರ್ಸ್  ಮೊದಲ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದರು. ನಂತರ ಬ್ಯಾಟಿಂಗ್ ಗೆ ಬಂದ ಪಾಕ್ತೂನ್ಸ್ ತಂಡವು 7 ವಿಕೆಟ್ ನಷ್ಟಕ್ಕೆ ಕೇವಲ 118 ರನ್ ಗಳಿಸುವಷ್ಟು ಮಾತ್ರ ಶಕ್ತವಾಯಿತು. ಇದರೊಂದಿಗೆ  ZEE5 ಪ್ರಾಯೋಜಿತ ನಾರ್ದನ್ ವಾರಿಯರ್ಸ್ T-10 ಕ್ರಿಕೆಟ್ ಲೀಗ್ ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

25 ಎಸೆತಗಳಲ್ಲಿ 61 ರನ್ ಗಳಿಸಿದ ವೆಸ್ಟ್ ಇಂಡೀಸ್ ತಂಡದ ರೋವೆಮನ್ ಪೊವೆಲ್ ಅವರನ್ನು ಮ್ಯಾನ್ ಆಫ್ ದಿ ಮ್ಯಾಚ್ ಆದರು. ದಕ್ಷಿಣ ಆಫ್ರಿಕಾದ ಹಾರ್ಡಸ್ ವಿಲಿಯಂ ಅವರನ್ನು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಆಯ್ಕೆ ಮಾಡಲಾಯಿತು. ಇವರು ಪಂದ್ಯಾವಳಿಯಲ್ಲಿ 18 ವಿಕೆಟ್ ಕಬಳಿಸಿದರು.

ಎರಡನೇ ಆವೃತ್ತಿಯ ಟಿ-10 ಕ್ರಿಕೆಟ್ ಲೀಗ್ ನವಂಬರ್ 21ರಂದು ಆರಂಭವಾಯಿತು. ಒಟ್ಟು ಎಂಟು ತಂಡಗಳು ಭಾಗವಹಿಸಿದ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕರಾಚಿಯನ್ಸ್ ಹಾಗೂ ರಜಪೂತ್ಸ್ ತಂಡಗಳು ಮುಖಾಮುಖಿಯಾದವು. 

ಮೊದಲ ಆವೃತ್ತಿಯಲ್ಲಿ ಪಂಜಾಬಿ ಲೆಜೆಂಡ್ಸ್ ಅನ್ನು ಸೋಲಿಸುವ ಮೂಲಕ ಕೇರಳ ಕಿಂಗ್ಸ್ ಈ ಪ್ರಶಸ್ತಿಯನ್ನು ಗೆದ್ದಿದ್ದರು. ಲೀಗ್ನ ಮೊದಲ ಆವೃತ್ತಿಯಲ್ಲಿ ಆರು ತಂಡಗಳು ಪಾಲ್ಗೊಂಡಿದ್ದವು. ಲೀಗ್ನ ಹೆಚ್ಚುತ್ತಿರುವ ಜನಪ್ರಿಯತೆಯ ಕಾರಣದಿಂದಾಗಿ ಸಂಘಟಕರು ಎರಡು ತಂಡಗಳನ್ನು ಸೇರಿಸಿದರು.

ನಾರ್ದನ್ ವಾರಿಯರ್ಸ್ ತಂಡವು ಮೊದಲ ಆವೃತ್ತಿಯಲ್ಲಿ ಲೀಗ್ನಲ್ಲಿ ಇರಲಿಲ್ಲ. ಇದೇ ಮೊದಲ ಬಾರಿಗೆ ಟಿ-10 ಕ್ರಿಕೆಟ್ ಲೀಗ್  ಪ್ರವೇಶಿಸಿದ ನಾರ್ದನ್ ವಾರಿಯರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 

By continuing to use the site, you agree to the use of cookies. You can find out more by clicking this link

Close