ಅಮೆರಿಕಾದ ಬೋಸ್ಟನ್​ನಲ್ಲಿ ನೈಸರ್ಗಿಕ ಗ್ಯಾಸ್​ ಪೈಪ್​ಲೈನ್​ಗೆ ಬೆಂಕಿ, ಹಲವೆಡೆ ಸ್ಫೋಟ

ಗುರುವಾರದಂದು ನಡೆದ ಈ ಸ್ಫೋಟಗಳಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಹಾಗೂ ಸಾವಿರಾರು ಮಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. 

Updated: Sep 14, 2018 , 09:50 AM IST
ಅಮೆರಿಕಾದ ಬೋಸ್ಟನ್​ನಲ್ಲಿ ನೈಸರ್ಗಿಕ ಗ್ಯಾಸ್​ ಪೈಪ್​ಲೈನ್​ಗೆ ಬೆಂಕಿ, ಹಲವೆಡೆ ಸ್ಫೋಟ
Pic: Reuters

ಬೋಸ್ಟನ್​: ಅಮೆರಿಕಾದ ಉತ್ತರ ಬೋಸ್ಟನ್​ನಲ್ಲಿ ಗುರುವಾರ ರಾತ್ರಿ ನೈಸರ್ಗಿಕ ಗ್ಯಾಸ್ ಪೈಪ್​ಲೈನ್​ನಲ್ಲಿ ಸೋರಿಕೆ ಸಂಭವಿಸಿದ್ದು, ಸುಮಾರು 70 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. 

ಗುರುವಾರದಂದು ನಡೆದ ಈ ಸ್ಫೋಟಗಳಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಹಾಗೂ ಸಾವಿರಾರು ಮಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಮೆಸಾಚ್ಯುರೇಟ್ಸ್​ ರಾಜ್ಯ ಪೊಲೀಸರು ನೀಡಿರುವ ಮಾಹಿತಿ ಅನ್ವಯ ಈವರೆಗೂ ಒಟ್ಟು 70 ಸ್ಥಳಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಸ್ಫೋಟಗಳು ಮೂರು ಬೋಸ್ಟನ್ ಸ್ಥಳಗಳಲ್ಲಿ ಸಂಭವಿಸಿವೆ. ಜನರು ತಮ್ಮ ಮನೆಗಳಿಂದ ಸುರಕ್ಷಿತವಾಗಿರಲು ಪ್ರಚಾರ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ತನಿಖೆ ನಂತರ ಮಾತ್ರ ಸ್ಫೋಟಗಳಿಗೆ ನಿಖರ ಕಾರಣಗಳನ್ನು ತಿಳಿಯಲು ಸಾಧ್ಯ ಎನ್ನಲಾಗಿದೆ. ಲಾರೆನ್ಸ್, ಎಂಡೋವರ್ ಮತ್ತು ನಾರ್ತ್ ಎಂಡೋವರ್ ಈಸ್ಟ್ ಕೋಸ್ಟ್ ಪಟ್ಟಣಗಳಲ್ಲಿ ಈ ಪ್ರದೇಶಗಳಲ್ಲಿ ಗ್ಯಾಸ್ ಸೋರಿಕೆಗಳ ವರದಿಗಳಿವೆ. ಈ ಸ್ಫೋಟಗಳ ನಂತರ, ಬೋಸ್ಟನ್ನ ವಿವಿಧ ಪ್ರದೇಶಗಳಲ್ಲಿ ಬೆಂಕಿಯು ಸಿಲುಕಿದೆ, ಈ ಪ್ರದೇಶಗಳಲ್ಲಿ ಇನ್ನಷ್ಟು ಸ್ಫೋಟಗಳು ಸಂಭವಿಸದಿರಲು ವಿದ್ಯುತ್​ ಸಂಪರ್ಕವನ್ನೂ ಕಡಿತಗೊಳಿಸುವುದರೊಂದಿಗೆ ಗ್ಯಾಸ್​ ಸರ್ವಿಸ್​ ನಿಲ್ಲಿಸಲಾಗಿದೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.