ಇಂಡೋನೇಷಿಯಾದಲ್ಲಿ ಹಡಗು ಮುಳುಗಿ 24 ಮಂದಿ ಸಾವು

ಹಡಗೊಂದು ಮುಳುಗಿದ ಪರಿಣಾಮ ಕನಿಷ್ಠ 24ಮಂದಿ ಸಾವನ್ನಪ್ಪಿದ ಧಾರುಣ ಘಟನೆ ಬುಧವಾರ ನಡೆದಿದೆ. 

Updated: Jul 4, 2018 , 04:53 PM IST
ಇಂಡೋನೇಷಿಯಾದಲ್ಲಿ ಹಡಗು ಮುಳುಗಿ 24 ಮಂದಿ ಸಾವು

ಜಕಾರ್ತಾ: ಇಂಡೋನೇಷಿಯಾದ ಸುಲಾವೆಸಿ ದ್ವೀಪದ ಬಳಿಯಲ್ಲಿ ಹಡಗೊಂದು ಮುಳುಗಿದ ಪರಿಣಾಮ ಕನಿಷ್ಠ 24ಮಂದಿ ಸಾವನ್ನಪ್ಪಿದ ಧಾರುಣ ಘಟನೆ ಬುಧವಾರ ನಡೆದಿದೆ. 

ಸಮುದ್ರ ತೀರದಿಂದ 300 ಮೀಟರ್ ದೂರದಲ್ಲಿ ಹಡಗು ಚಲಿಸುತ್ತಿದ್ದು, ಸಮುದ್ರದ ಅಲೆಗಳು ಹೆಚ್ಚಾದ ಪರಿಣಾಮ ಅಪಾಯದ ಮುನ್ಸೂಚನೆ ಅರಿತ ನಾವಿಕ ಮುಳುಗುತ್ತಿದ್ದ ದೋಣಿಯನ್ನು ತೀರದ ದಿಬ್ಬವೊಂದರ ಕಡೆಗೆ ಮುನ್ನಡೆಸಿದ್ದರಿಂದ 100 ಹೆಚ್ಚು ಜನರನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ಘಟನೆಯಲ್ಲಿ 24 ಮೃತ ದೇಹಗಳು ದೊರೆತಿದ್ದು, 74 ಮಂದಿ ಬದುಕುಳಿದಿದ್ದಾರೆ. ಆದರೆ ಉಳಿದ 41 ಮಂದಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಇಂಡೋನೇಶ್ಯಾದ ವಿಪತ್ತು ನಿರ್ವಹಣೆ ಸಂಸ್ಥೆ ವಕ್ತಾರ ಸುಟೊಪೊ ಪುರ್ವೋ ನುಗ್ರೊಹೋ ಹೇಳಿದ್ದಾರೆ.

"ಮಳೆ ಮತ್ತು ಅಬ್ಬರದ ಅಲೆಗಳ ಕಾರಣದಿಂದಾಗಿ ಕೆಲವು ಪ್ರಯಾಣಿಕರು ಇನ್ನೂ ತೀರದಲ್ಲಿಯೇ ಉಳಿದಿದ್ದಾರೆ" ಎಂದು ನುಗ್ರೊಹೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಡಗಿನಲ್ಲಿ 139 ಪ್ರಯಾಣಿಕರು ಮತ್ತು 48 ವಾಹನಗಳೂ ಇದ್ದುವು ಎನ್ನಲಾಗಿದೆ.