ಆಫ್ಘಾನಿಸ್ತಾನದಲ್ಲಿ 25 ತಾಲಿಬಾನ್ ಉಗ್ರರ ಹತ್ಯೆ

ಅಫ್ಘಾನಿಸ್ತಾನದ ಘಝ್ನಿ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಕನಿಷ್ಠ 25 ತಾಲಿಬಾನ್ ಗೆ ಸೇರಿದ ಉಗ್ರರು ಮೃತಪಟ್ಟಿದ್ದಾರೆ ಮತ್ತು ಇತರ 13 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Manjunath Naragund Manjunath Naragund | Updated: Feb 5, 2018 , 08:23 PM IST
ಆಫ್ಘಾನಿಸ್ತಾನದಲ್ಲಿ 25 ತಾಲಿಬಾನ್ ಉಗ್ರರ ಹತ್ಯೆ

ಕಾಬೂಲ್: ಅಫ್ಘಾನಿಸ್ತಾನದ ಘಝ್ನಿ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಕನಿಷ್ಠ 25 ತಾಲಿಬಾನ್ ಗೆ ಸೇರಿದ ಉಗ್ರರು ಮೃತಪಟ್ಟಿದ್ದಾರೆ ಮತ್ತು ಇತರ 13 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ದಂಗೆಕೋರರ ಪ್ರದೇಶವನ್ನು ತೆರವುಗೊಳಿಸಲು ಒಂದು ವಾರದ ಹಿಂದೆ  ಘಜ್ನಿ ಪ್ರಾಂತ್ಯದ ಡೆಹ್ ಯಾಕ್ ಜಿಲ್ಲೆಯಲ್ಲಿ 'ನಬಾರ್ದ್-ಎ-ಅಹಾನಿನ್' ಎನ್ನುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಕಾರ್ಯಚರಣೆಯಲ್ಲಿ ವಾಯು ಪಡೆಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ ಎಂದು ಅದು ತಿಳಿಸಿದೆ.

ಭಾನುವಾರ ಈ ಕುರಿತಾಗಿ ಹೇಳಿಕೆ ನೀಡಿರುವ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ, ಕಳೆದ 24 ಗಂಟೆಗಳಲ್ಲಿ  ದೇಶದಾದ್ಯಂತ  ಕನಿಷ್ಠ ನೂರು ಉಗ್ರರು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ಮೂರು ಪ್ರಮುಖ ಉಗ್ರರ ದಾಳಿಗಳು ಕಾಬೂಲ್ನಲ್ಲಿ ನಡೆದ ನಂತರ ಈ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

 

With ANI inputs

By continuing to use the site, you agree to the use of cookies. You can find out more by clicking this link

Close