ದೀಪಾವಳಿ ಪ್ರಯುಕ್ತ ಭಾರತಕ್ಕೆ ವಿಶೇಷ ಗಿಫ್ಟ್ ನೀಡಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ ಭಾರತಕ್ಕೆ ದೀಪಾವಳಿ ಪ್ರಯುಕ್ತ ವಿಶೇಷ ಗಿಫ್ಟ್ ನ್ನು ನೀಡಿದೆ.ವಿಶ್ವಸಂಸ್ಥೆಯ ಪೋಸ್ಟಲ್ ಸಿಸ್ಟಮ್ ಹಬ್ಬದ ಪ್ರಯುಕ್ತ ದೀಪಾವಳಿಯ ಹಬ್ಬವನ್ನು ಬಿಂಬಿಸುವ ಎರಡು ಸ್ಟಾಂಪ್ ಗಳನ್ನು ಬಿಡುಗಡೆ ಮಾಡಿ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯತನದ ಗೆಲುವು ಹಬ್ಬವನ್ನು ಹೇಳಿಕೊಂಡಿದೆ.

Last Updated : Nov 7, 2018, 11:46 AM IST
 ದೀಪಾವಳಿ ಪ್ರಯುಕ್ತ ಭಾರತಕ್ಕೆ ವಿಶೇಷ ಗಿಫ್ಟ್ ನೀಡಿದ ವಿಶ್ವಸಂಸ್ಥೆ  title=
Photo:twitter

ನವದೆಹಲಿ: ವಿಶ್ವಸಂಸ್ಥೆ ಭಾರತಕ್ಕೆ ದೀಪಾವಳಿ ಪ್ರಯುಕ್ತ ವಿಶೇಷ ಗಿಫ್ಟ್ ನ್ನು ನೀಡಿದೆ.ವಿಶ್ವಸಂಸ್ಥೆಯ ಪೋಸ್ಟಲ್ ಸಿಸ್ಟಮ್ ಹಬ್ಬದ ಪ್ರಯುಕ್ತ ದೀಪಾವಳಿಯ ಹಬ್ಬವನ್ನು ಬಿಂಬಿಸುವ ಎರಡು ಸ್ಟಾಂಪ್ ಗಳನ್ನು ಬಿಡುಗಡೆ ಮಾಡಿ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯತನದ ಗೆಲುವು ಹಬ್ಬವನ್ನು ಹೇಳಿಕೊಂಡಿದೆ.

ಇದಕ್ಕೆ ವಿಶ್ವಸಂಸ್ಥೆಯಲ್ಲಿನ  ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಕ್ಬರುದ್ದೀನ್ ಅವರು ಮಂಗಳವಾರದಂದು ಟ್ವೀಟ್ ಮಾಡಿ" ಥ್ಯಾಂಕ್ಯೂ ವಿಶ್ವಸಂಸ್ಥೆ, ನಮ್ಮೆಲ್ಲರ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯತನವನ್ನು ಸಾರುವ ದೀಪಾವಳಿ ಪ್ರಯುಕ್ತ ಸ್ಟಾಂಪ್ ಗಳನ್ನು ಬಿಡುಗಡೆ ಮಾಡಿದ್ದಕ್ಕೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಅಂಚೆಚೀಟಿಯ ದರ $ 1.15 ಡಾಲರ್ ಗಳಾಗಿವೆ ,ಇದು ಅಂತರರಾಷ್ಟ್ರೀಯ ಏರ್ ಮೆಲ್ ಗಳ ಮೂಲ ದರವಾಗಿದೆ.10 ಅಂಚೆಚೀಟಿಗಳು ಮತ್ತು ಸ್ಟಿಕ್ಕರ್ಗಳನ್ನು ಹೊಂದಿರುವ ಶೀಟ್ಗಳಲ್ಲಿ ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಅಂಚೆಚೀಟಿಗಳು ಅಧಿಕೃತವಾಗಿ ಕಳೆದ ತಿಂಗಳು ಬಿಡುಗಡೆಯಾಗಿವೆ ಮತ್ತು ಈಗ ಯುಎನ್ ಪ್ರಧಾನ ಕಚೇರಿ ಕಛೇರಿ ಮತ್ತು ಆನ್ಲೈನ್ನಲ್ಲಿ ಲಭ್ಯವಿದೆ.

Trending News