ಅಲ್ಜೀರಿಯಾದಲ್ಲಿ ಅಪಘಾತಕ್ಕೊಳಗಾದ ಮಿಲಿಟರಿ ವಿಮಾನ

ಪಶ್ಚಿಮ ಸಹರಾದ 26 ಮಂದಿ ಸೇರಿದಂತೆ ಕನಿಷ್ಠ 105 ಜನರು ಅಪಘಾತದಲ್ಲಿ ಸತ್ತಿದ್ದಾರೆ ಎಂದು ಸ್ಥಳೀಯ ವರದಿ ತಿಳಿಸಿದೆ.

Updated: Apr 11, 2018 , 03:19 PM IST
ಅಲ್ಜೀರಿಯಾದಲ್ಲಿ ಅಪಘಾತಕ್ಕೊಳಗಾದ ಮಿಲಿಟರಿ ವಿಮಾನ

ಅಲ್ಜೀರಿಯಾ: ಅಲ್ಜೀರಿಯಾದ ಮಿಲಿಟರಿ ವಿಮಾನ ಬುಧವಾರ ಅಪಘಾತಕ್ಕೀಡಾಗಿದ್ದು, ಈ ವಿಮಾನವು ಮಿಲಿಟರಿ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು ಎಂದು ವರದಿಯಾಗಿದೆ. ಪಶ್ಚಿಮ ಸಹರಾದ 26 ಮಂದಿ ಸೇರಿದಂತೆ ಕನಿಷ್ಠ 105 ಜನರು ಅಪಘಾತದಲ್ಲಿ ಸತ್ತಿದ್ದಾರೆ ಎಂದು ಸ್ಥಳೀಯ ವರದಿ ತಿಳಿಸಿದೆ.

ವಿಮಾನದಲ್ಲಿ ಕನಿಷ್ಠ 200 ಜನರಿದ್ದರು ಎಂದು ಕೆಲವು ವರದಿಗಳು ತಿಳಿಸುತ್ತಿವೆ.  ಕನಿಷ್ಟ ಹದಿನಾಲ್ಕು 14 ಅಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ವಿಮಾನ ನಿಲ್ದಾಣದ ಸಮೀಪವಿರುವ ಎಲ್ಲಾ ರಸ್ತೆಗಳನ್ನು ತುರ್ತು ಸೇವೆಗಳಿಗಾಗಿ ಮುಚ್ಚಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಭರದಿಂದ ಸಾಗಿದೆ.

ರಾಜಧಾನಿ ಅಲ್ಜಿಯರ್ಸ್ ಬಳಿ ಬೌಫರಿಕ್ ಮಿಲಿಟರಿ ವಿಮಾನ ನಿಲ್ದಾಣದಿಂದ ಹೋರಟ ಸ್ವಲ್ಪ ಸಮಯದಲ್ಲೇ ಈ ಅಪಘಾತ ಸಂಭವಿಸಿದೆ. ಇದು ದೇಶದ ವಾಯುಪಡೆಯಿಂದ ಬಳಸಲ್ಪಡುವ ವಿಮಾನನಿಲ್ದಾಣವಾಗಿದೆ.

ವರದಿಗಳ ಪ್ರಕಾರ, ವಿಮಾನ ಇಲ್ಯುಶಿನ್ IL -76 ವಿಮಾನವು ಪಶ್ಚಿಮ ಅಲ್ಜೇರಿಯಾ ನಗರ ಬೆಚಾರ್ ಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಐಎಲ್ -76 ಮಧ್ಯಮ ಶ್ರೇಣಿಯ ಮಿಲಿಟರಿ ಸಾರಿಗೆ ವಿಮಾನವಾಗಿದೆ. ನ್ಯಾಟೋ ಸಂಕೇತನಾಮ 'ಕ್ಯಾಂಡಿಡ್' ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ವಿಮಾನವು ಮುಖ್ಯವಾಗಿ ಪ್ಯಾರಾಟ್ರೂಪರ್ಗಳನ್ನು ಬಿಡಲು, ಸಿಬ್ಬಂದಿ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮಧ್ಯಮ-ಗಾತ್ರದ ಯುದ್ಧ ಟ್ಯಾಂಕ್ಗಳು, ವಾಯುಪಡೆಗಳ ಸರಕು ಸಾಗಣೆ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳ ಸಾರಿಗೆಯೊಂದಿಗೆ ಸಾಗಿಸಲು ಬಳಸಲಾಗುತ್ತದೆ.

By continuing to use the site, you agree to the use of cookies. You can find out more by clicking this link

Close