ಮಹಿಳೆಯ ಕಣ್ಣಿನಲ್ಲಿ 28 ವರ್ಷಗಳ ಹಿಂದಿನ ಕಾಂಟ್ಯಾಕ್ಟ್ ಲೆನ್ಸ್ ಪತ್ತೆ!

 ಕಳೆದ 28 ವರ್ಷಗಳಿಂದ ಆ ಕಾಂಟ್ಯಾಕ್ಟ್ ಲೆನ್ಸ್ ಕಣ್ಣಿನಲ್ಲಿ ಇದ್ದರೂ ಮಹಿಳೆಗೆ ತಿಳಿಯದಿರುವುದು ಕಂಡು ವೈದ್ಯರಿಗೇ ಅಚ್ಚರಿಯಾಗಿತ್ತು. 

Updated: Aug 19, 2018 , 05:23 PM IST
ಮಹಿಳೆಯ ಕಣ್ಣಿನಲ್ಲಿ 28 ವರ್ಷಗಳ ಹಿಂದಿನ ಕಾಂಟ್ಯಾಕ್ಟ್ ಲೆನ್ಸ್ ಪತ್ತೆ!

ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ವುದ್ಯರ ಬಳಿ ತೆರಳಿದ್ದ ಬ್ರಿಟನ್ ಮಹಿಳೆಯ ಕಣ್ಣಿನಲ್ಲಿ 28 ವರ್ಷಗಳ ಹಿಂದಿನ ಕಾಂಟ್ಯಾಕ್ಟ್ ಲೆನ್ಸ್ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. 

ಈ ಬಗ್ಗೆ ಬಿಎಂಜೆ ಜರ್ನಲ್ ಪ್ರಕಟಿಸಿದ್ದು, ಸಿಎನ್ಎನ್ ಸಂಸ್ಥೆ ವರದಿ ಮಾಡಿದೆ. ಅದರಂತೆ 42 ವರ್ಷಗಳ ಮಹಿಳೆಯೊಬ್ಬರು ಕಣ್ಣಿನ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗ ವೈದ್ಯರು ಶಸ್ತ್ರ ಚಿಕಿತ್ಸೆಗೂ ಮೊದಲು ಎಂಆರ್ ಐ ಸ್ಕ್ಯಾನಿಂಗ್ ಮಾಡಿದಾಗ ಆಕೆಯ ಕಣ್ಣಿನಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಇದ್ದುದು ಪತ್ತೆಯಾಗಿದೆ. ಇದು ಬಹಳ ಹಳೆಯದಾಗಿದ್ದು, ಸಂಪೂರ್ಣ ಹಾಳಾದ ಸ್ಥಿತಿಯಲ್ಲಿದ್ದುದನ್ನು ಕಂಡ ವೈದ್ಯರಿಗೆ ಈ ಲೆನ್ಸ್ ಆಕೆಯ ಕಣ್ಣಿನಲ್ಲಿ ಬಂದದ್ದಾದರೂ ಹೇಗೆ ಎಂಬ ಪ್ರಶ್ನೆ ಕಾಡತೊಡಗಿತು. ಈ ಬಗ್ಗೆ ಆ ಮಹಿಳೆಯನ್ನು ಕೇಳಲಾಗಿ, ಆಕೆಗೆ ತನ್ನ ಕಣ್ಣಿನಲ್ಲಿ ಲೆನ್ಸ್ ಇರುವ ಅರಿವೇ ಇರಲಿಲ್ಲ ಎಂಬುದನ್ನು ತಿಳಿದ ವೈದ್ಯರಿಗೆ ಇದೊಂದು ಉಹೆಗೂ ನಿಲುಕದ ಪ್ರಶ್ನೆಯಾಗಿಯೇ ಉಳಿದಿತ್ತು. 

ಆದರೆ, ಈ ಬಗ್ಗೆ ಆ ಮಹಿಳೆಯ ತಾಯಿಯನ್ನು ವಿಚಾರಿಸಿದಾಗ, 28 ವರ್ಷಗಳ ಹಿಂದೆ ತಮ್ಮ ಮಗಳು ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದುದಾಗಿಯೂ, ಆದರೆ ಬ್ಯಾಡ್ಮಿಂಟನ್ ಆಡುವಾಗ ಶಟಲ್ ಕಾಕ್ ಆಕೆಯ ಕಣ್ಣಿಗೆ ತಗುಲಿ ನೋವಾಗಿ ಆ ಲೆನ್ಸ್ ಬಿದ್ದುಹೊಗಿರಬಹುದು ಎಂದು ತಿಳಿದಿದ್ದಾಗಿಯೂ ಹೇಳಿದ್ದಾರೆ. ಆದರೂ ಕಳೆದ 28 ವರ್ಷಗಳಿಂದ ಆ ಕಾಂಟ್ಯಾಕ್ಟ್ ಲೆನ್ಸ್ ಕಣ್ಣಿನಲ್ಲಿ ಇದ್ದರೂ ಮಹಿಳೆಗೆ ತಿಳಿಯದಿರುವುದು ಕಂಡು ವೈದ್ಯರಿಗೇ ಅಚ್ಚರಿಯಾಗಿತ್ತು. ಆದರೂ 28 ವರ್ಷಗಳ ಹಳೆಯ ಕಾಂಟ್ಯಾಕ್ಟ್ ಲೆನ್ಸ್ ಅನ್ನು ಮಹಿಳೆಯ ಕಣ್ಣಿನಿಂದ ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. 

By continuing to use the site, you agree to the use of cookies. You can find out more by clicking this link

Close