ಫೇಸ್ ಬುಕ್ ನಲ್ಲಿ ನಿಮ್ಮ ಫೋಟೋಗಳನ್ನು 3D ಗೆ ಬದಲಿಸಿ!

ನ್ಯೂಸ್ ಫೀಡ್ ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ನಲ್ಲಿ 3 ಡಿ ಫೋಟೋ ಸೃಷ್ಟಿಸುವ ಅವಕಾಶವನ್ನು ಫೇಸ್ ಬುಕ್ ಈಗ ಬಳಕೆದಾರರಿಗೆ ನೀಡುತ್ತಿದೆ. 

Last Updated : Oct 14, 2018, 03:04 PM IST
ಫೇಸ್ ಬುಕ್ ನಲ್ಲಿ ನಿಮ್ಮ ಫೋಟೋಗಳನ್ನು 3D ಗೆ ಬದಲಿಸಿ! title=

ಸ್ಯಾನ್ ಫ್ರಾನ್ಸಿಸ್ಕೊ: ನ್ಯೂಸ್ ಫೀಡ್ ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ನಲ್ಲಿ 3 ಡಿ ಫೋಟೋ ಸೃಷ್ಟಿಸುವ ಅವಕಾಶವನ್ನು ಫೇಸ್ ಬುಕ್ ಈಗ ಬಳಕೆದಾರರಿಗೆ ನೀಡುತ್ತಿದೆ. 

3D ನಲ್ಲಿ ಫೋಟೋ ರಚಿಸಲು ಅನೇಕ ಪದರಗಳು, ವ್ಯತಿರಿಕ್ತ ಬಣ್ಣಗಳು ಮತ್ತು ಅಕ್ಷರಗಳನ್ನು ರಚಿಸಲು  ಹಲವು ರೀತಿಯ ಪ್ರಯೋಗ ಮಾಡಲು ಹೊಸ ಆಯ್ಕೆಗಳನ್ನು ನೀಡಲಾಗುತ್ತದೆ  ಎಂದು ಫೇಸ್ ಬುಕ್ ತಿಳಿಸಿದೆ.

"ಇಂದು ಪ್ರತಿಯೊಬ್ಬರೂ ನ್ಯೂಸ್ ಫೀಡ್ ಮತ್ತು ವಿಆರ್ನಲ್ಲಿ 3D ಫೋಟೋಗಳನ್ನು ನೋಡಲು ಸಾಧ್ಯವಾಗುತ್ತದೆ, 3D ಫೋಟೋಗಳನ್ನು ರಚಿಸುವ ಮತ್ತು ಹಂಚಿಕೊಳ್ಳುವ ಸಾಮರ್ಥ್ಯ ಇಂದಿನಿಂದ ಪ್ರಾರಂಭಿವಾಗುತ್ತದೆ" ಎಂದು ಫೇಸ್ಬುಕ್ 360 ಟೀಮ್ ಗುರುವಾರದಂದು ತನ್ನ ಬ್ಲಾಗ್ ಪೋಸ್ಟ್ನಲ್ಲಿ ಬರೆದಿದೆ.

3D ಫೋಟೋ ತಂತ್ರಜ್ಞಾನವು ವಿಷಯದ ನಡುವಿನ ಅಂತರವನ್ನು ಮುಂಭಾಗದಲ್ಲಿ ಮತ್ತು ಹಿನ್ನೆಲೆಯಲ್ಲಿ ಸೆರೆಹಿಡಿಯುತ್ತದೆ."ನಿಮ್ಮ ಹೊಂದಾಣಿಕೆಯ ಡ್ಯುಯಲ್-ಲೆನ್ಸ್ ಸ್ಮಾರ್ಟ್ಫೋನ್ ಬಳಸಿಕೊಂಡು` ಪೋಟ್ರೇಟ್` ಮೋಡ್ನಲ್ಲಿ ಫೋಟೋ ತೆಗೆದುಕೊಳ್ಳಿ, ನಂತರ ನೀವು ಫೇಸ್ಬುಕ್ನಲ್ಲಿ 3D ಫೋಟೋಯಾಗಿ ಹಂಚಿಕೊಳ್ಳುತ್ತೀರಿ, ಅಲ್ಲಿ ನೀವು ರಿಯಾಲಿಟಿ 3D ನಲ್ಲಿ ಫೋಟೋವನ್ನು ಸ್ಕ್ರಾಲ್  ಮಾಡಿಕೊಳ್ಳಬಹುದು ಎಂದು ಫೇಸ್ ಬುಕ್ ತಿಳಿಸಿದೆ.

ಫೇಸ್ ಬುಕ್  ಬಳಕೆದಾರರಿಗೆ "ಒಕುಲಸ್ ಗೋ" ಬ್ರೌಸರ್ ಅಥವಾ ಒಕ್ಲಸ್ ರಿಫ್ಟ್ನ ಫೈರ್ಫಾಕ್ಸ್ ಮೂಲಕ ಫೋಟೋಗಳಲ್ಲಿ ಮೂರು ಆಯಾಮದ ಮೂಲಕ 3D ಫೋಟೋಗಳನ್ನು ವಿಆರ್ನಲ್ಲಿ ವೀಕ್ಷಿಸಲು ಅನುಮತಿಸುತ್ತದೆ.

Trending News