ವಿಶ್ವದ ಅತ್ಯಂತ ಚಿಕ್ಕ ಉಪಗ್ರಹ ಉಡಾವಣೆ ಮಾಡಿದ ಜಪಾನ್

    

Manjunath Naragund Manjunath Naragund | Updated: Feb 5, 2018 , 04:31 PM IST
ವಿಶ್ವದ ಅತ್ಯಂತ ಚಿಕ್ಕ ಉಪಗ್ರಹ ಉಡಾವಣೆ ಮಾಡಿದ ಜಪಾನ್
Photo Courtesy: ANI

ನವದೆಹಲಿ: ಜಪಾನ ದೇಶವು ವಿಶ್ವದ ಅತ್ಯಂತ ಚಿಕ್ಕ ಉಪಗ್ರಹ-ಸಾಗಿಸುವ  ರಾಕೆಟನ್ನು ಶನಿವಾರದಂದು  ಉಡಾವಣೆ ಮಾಡುವಲ್ಲಿ ಕೊನೆಗೂ ಯಶಸ್ವಿಯಾಗಿದೆ. 
 
ರಾಕೆಟ್, ಎಸ್ಎಸ್ -520 ಸರಣಿಯು 10 ಮೀಟರ್ ಉದ್ದ ಮತ್ತು 50 ಸೆಂಟಿಮೀಟರ್ಗಳ ಗಾತ್ರವನ್ನು ಹೊಂದಿರುವ ಉಪಗ್ರಹ  ಕಾಗೊಶಿಮಾ ಪ್ರಿಫೆಕ್ಚರ್ನ ಉಕಿನುರಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡು ನಿರ್ಧಿಷ್ಟ ಕಕ್ಷೆಯನ್ನು ತಲುಪಿದೆ ಎಂದು ಜಪಾನಿನ  ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ (JAXA) ತಿಳಿಸಿದೆ.

ಎಸ್ಎಸ್ -520 ಸರಣಿಯ ನಂ 5 ವಾಹನವು  ಕೇವಲ ಮೂರು ಕೆಜಿ ತೂಗುವ ಮೈಕ್ರೋ ಉಪಗ್ರಹವನ್ನು ಹೊತ್ತೊಯ್ದಿದೆ ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ.

ಜಪಾನಿನ ಬಾಹ್ಯಾಕಾಶ ಸಂಸ್ಥೆ  ವಕ್ತಾರರು ಹೇಳುವಂತೆ ಮೈಕ್ರೋ ಉಪಗ್ರಹಗಳಿಗೆ  ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಡಿಮೆ ವೆಚ್ಚದಲ್ಲಿ ವಾಣಿಜ್ಯವಾಗಿ ಲಭ್ಯವಿರುವ ಘಟಕಗಳೊಂದಿಗೆ ಈ ಸಣ್ಣ ರಾಕೆಟ್ಗಳನ್ನು ತಯಾರಿಸುವ ತಂತ್ರಜ್ಞಾನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಹಿಂದೆ ಈ ಜನವರಿ 15, 2017 ರಂದು ಇದೆ ಮೈಕ್ರೋ ಉಪ್ರಗ್ರಹವನ್ನು ಉಡಾವಣೆ ಮಾಡುವ ಯತ್ನ ವಿಫಲಗೊಂಡಿತ್ತು ಎಂದು ಜಪಾನಿನ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

 

with ANI Inputs

By continuing to use the site, you agree to the use of cookies. You can find out more by clicking this link

Close