ಜಗತ್ತಿನಲ್ಲಿ ಮೊದಲ ಬಾರಿಗೆ ಮಗುವಿಗೆ 'ಸ್ತನಪಾನ' ಮಾಡುತ್ತಿರುವ ತಂದೆ

ಮ್ಯಾಕ್ಸ್ಮಿಲನ್ ನೆಬುಯೂರ್ ಹಾಲುಣಿಸುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪಡೆಯುತ್ತಿವೆ.

Last Updated : Jul 6, 2018, 01:33 PM IST
ಜಗತ್ತಿನಲ್ಲಿ ಮೊದಲ ಬಾರಿಗೆ ಮಗುವಿಗೆ 'ಸ್ತನಪಾನ' ಮಾಡುತ್ತಿರುವ ತಂದೆ title=
Pic: Facebook

ಒಬ್ಬ ತಂದೆ ಮಕ್ಕಳಿಗೆ ಏನೆಲ್ಲಾ ಮಾಡುತ್ತಾನೆ. ತಂದೆ ಮಗುವನ್ನು ತಾಯಿಯಂತೆ ನೋಡಿಕೊಳ್ಳಬಹುದು. ಮಗುವಿಗಾಗಿ ಏನು ಬೇಕಾದರೂ ಮಾಡಬಹುದು. ಆದರೆ ಹಾಲುಣಿಸಲು ಸಾಧ್ಯವೇ? ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಯುಎಸ್, ವಿಸ್ಕೊನ್ ಸಿನ್ ನಲ್ಲಿ ತನ್ನ ಮಗಳಿಗೆ ತಂದೆ ಏನು ಮಾಡಬಹುದೆಂಬ ಪ್ರಶ್ನೆಗೆ ಇತ್ತೀಚಿನ ಉದಾಹರಣೆ ಸಾಕ್ಷಿಯಾಗಿದೆ. ಮ್ಯಾಕ್ಸ್ಮಿಲನ್ ನೆಬುಯೂರ್ ಮಗುವಿಗೆ 'ಸ್ತನ ಪಾನ' ಮಾಡಿಸಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಈ ವ್ಯಕ್ತಿ ಈ ರೀತಿಯಾಗಿ ತನ್ನ ನವಜಾತ ಮಗಳಿಗೆ 'ಸ್ತನ ಪಾನ' ಮಾಡಿದ್ದಾರೆ. ಮ್ಯಾಕ್ಸ್ಮಿಲನ್ ನೆಬುಯೂರ್ ಮಗುವಿಗೆ ಎದೆಹಾಲುಣಿಸುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪಡೆಯುತ್ತಿವೆ.

ಒಬ್ಬ ಪುರುಷ ಮಗುವಿಗೆ ಹಾಲುಣಿಸಲು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ...! ಅದು ಹೇಗೆ ಸಾಧ್ಯ ಆಗಿದೆ ಅನ್ನೋದನ್ನ ನಾವು ನಿಮಗೆ ತಿಳಿಸುತ್ತೇವೆ. ಮ್ಯಾಕ್ಸಿಮಿಲಿಯನ್ ನೆಬ್ಯೂಯೂರ್ ಪತ್ನಿ ಡೆಲಿವರಿ ಸುಲಭವಾಗಿರಲಿಲ್ಲ. ಅವರ ರಕ್ತದೊತ್ತಡ ತುಂಬಾ ಹೆಚ್ಚಿತ್ತು.
2018 ರ ಜೂನ್ 26 ರಂದು ಆಕೆಗೆ ಸಿಜೇರಿಯನ್ ಮಾಡಿ ಡೆಲಿವರಿ ಮಾಡಲಾಯಿತು. ಅಕೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆ ಮಗುವಿಗೆ ರೊಜೆಲಿ ಎಂದು ಹೆಸರಿಡಲಾಯಿತು.

ಮ್ಯಾಕ್ಸ್ಮಿಲನ್ ಅವರ ಹೆಂಡತಿಗೆ ಮಗುವಿಗೆ ಸ್ತನ್ಯಪಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಸಮಯದಲ್ಲಿ ನರ್ಸ್ ಮತ್ತು  ಮ್ಯಾಕ್ಸ್ಮಿಲನ್ ನೆಬುಯೂರ್ ಒಟ್ಟಿಗೆ ಸೇರಿ ಮಗುವಿಗೆ ಸ್ತನಪಾನ ಮಾಡಲು ಒಂದು ಹೊಸ ವಿಧಾನವನ್ನು ಕಂಡು ಹಿಡಿದರು. ತನ್ನ ಎದೆಗೆ ಕೃತಕ ಮೊಲೆಗಳನ್ನು ಹಾಕುವ ಮೂಲಕ ತನ್ನ ಮಗಳಿಗೆ ಸ್ತನ ಪಾನ ಮಾಡಬಹುದೇ ಎಂದು ಮ್ಯಾಕ್ಸ್ಮಿಲನ್ ನರ್ಸ್ ಬಳಿ ಕೇಳಿಕೊಂಡರು. 

ನಂತರ ನರ್ಸ್, ಮ್ಯಾಕ್ಸ್ಮಿಲನ್ ಎದೆಗೆ ಒಂದು ಪ್ಲಾಸ್ಟಿಕ್ ಮೊಲೆಯನ್ನು  ಜೋಡಿಸಿ ಅದಕ್ಕೆ ಒಂದು ಪೈಪ್ ಸಂಪರ್ಕಿಸಿ ಅದನ್ನು ಹಾಲಿನೊಂದಿಗೆ ತುಂಬಿದ ಸಿರಂಜ್ ಟ್ಯೂಬ್ ನೊಂದಿಗೆ ಜೋಡಿಸಿದರು. ಈ ರೀತಿಯಾಗಿ ಆಟ ತನ್ನ ಮಗಳಿಗೆ ಹಾಲುಣಿಸಿದರು.

ಮ್ಯಾಕ್ಸ್ಮಿಲನ್ ಈ ಅನುಭವವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಪಡೆದಿದೆ.

Trending News