ಇನ್ನ್ಮುಂದೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ರೆ ಈ ದೇಶಗಳಿಗೆ ಭೇಟಿ ನೀಡಬಹುದು..!!!

ನಿಮಗೆ ವಿದೇಶಕ್ಕೆ ಹೋಗಬೇಕೆನ್ನುವ ಕನಸು ಇದ್ದರೆ ಅದೀಗ ಈಡೇರುವಂತಹ ಸಮಯ ಬಂದಿದೆ. ಓ ಅದೇಗೆ ಅಂತೀರಾ?. ಹೌದು, ಕೇಂದ್ರ ಗೃಹ ಸಚಿವಾಲಯ ತಿಳಿಸಿರುವ ಪ್ರಕಾರ ಆಧಾರ ಕಾರ್ಡ್ ಇದ್ದರೆ ನೀವು ಭೂತಾನ್ ಮತ್ತು ನೇಪಾಳ ದೇಶಗಳಿಗೆ ಯಾವುದೇ ವೀಸಾದ ಅಗತ್ಯವಿಲ್ಲದೆ ಹೋಗಬಹುದು.

Last Updated : Jan 20, 2019, 02:09 PM IST
ಇನ್ನ್ಮುಂದೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ರೆ ಈ ದೇಶಗಳಿಗೆ ಭೇಟಿ ನೀಡಬಹುದು..!!! title=

ನವದೆಹಲಿ: ನಿಮಗೆ ವಿದೇಶಕ್ಕೆ ಹೋಗಬೇಕೆನ್ನುವ ಕನಸು ಇದ್ದರೆ ಅದೀಗ ಈಡೇರುವಂತಹ ಸಮಯ ಬಂದಿದೆ. ಓ ಅದೇಗೆ ಅಂತೀರಾ?. ಹೌದು, ಕೇಂದ್ರ ಗೃಹ ಸಚಿವಾಲಯ ತಿಳಿಸಿರುವ ಪ್ರಕಾರ ಆಧಾರ ಕಾರ್ಡ್ ಇದ್ದರೆ ನೀವು ಭೂತಾನ್ ಮತ್ತು ನೇಪಾಳ ದೇಶಗಳಿಗೆ ಯಾವುದೇ ವೀಸಾದ ಅಗತ್ಯವಿಲ್ಲದೆ ಹೋಗಬಹುದು.

ಭಾರತೀಯ ನಾಗರಿಕರಾಗಿರುವ ಯಾವುದೇ ವ್ಯಕ್ತಿಗಳಿಗೆ ಇನ್ನ್ಮುಂದೆ ಈ ಎರಡು ದೇಶಗಳಿಗೆ ಹೋಗಬೇಕಾದರೆ ಯಾವುದೇ ರೀತಿಯ ವೀಸಾದ ಅಗತ್ಯವಿಲ್ಲ, ನಿಮ್ಮ ಬಳಿ ಪಾಸ್ ಪೋರ್ಟ್ ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿ ಇದ್ದರೆ ಈ ಎರಡು ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದು.

ಈ ಹಿಂದೆ 65 ಕ್ಕಿಂತ ಅಧಿಕ 15 ವರ್ಷದೊಳಗಿರುವ ವ್ಯಕ್ತಿಗಳು ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ,ಕೇಂದ್ರ ಸರ್ಕಾರದ ಆರೋಗ್ಯ ಸೇವಾ ಕಾರ್ಡ್ ಪಡಿತರ ಚೀಟಿಯನ್ನು ತೋರಿಸಬೇಕಾಗಿತ್ತು,ಆದರೆ ಆಧಾರ್ ಕಾರ್ಡ್ ಮಾತ್ರ ಗಣನೆಗೆ ತೆಗೆದುಕೊಂಡಿರಲಿಲ್ಲ.ಆದರೆ ಈಗ ಆಧಾರ್ ಕಾರ್ಡ್ ನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 

Trending News