2+2 ಮಾತುಕತೆಗೆ ಮುಂದಾದ ಭಾರತ-ಅಮೇರಿಕಾ

ಭಾರತ ಮತ್ತು ಅಮೇರಿಕಾ ಈಗ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ತೀರ್ಮಾನಕ್ಕೆ ಬಂದಿವೆ ಅದರಲ್ಲೂ ಈ ವಾರ ರಕ್ಷಣಾ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಲಿವೆ ಎಂದು ಹೇಳಲಾಗಿದೆ.

Updated: Sep 4, 2018 , 04:51 PM IST
2+2 ಮಾತುಕತೆಗೆ ಮುಂದಾದ ಭಾರತ-ಅಮೇರಿಕಾ

ವಾಷಿಂಗ್ಟನ್: ಭಾರತ ಮತ್ತು ಅಮೇರಿಕಾ ಈಗ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ತೀರ್ಮಾನಕ್ಕೆ ಬಂದಿವೆ ಅದರಲ್ಲೂ ಈ ವಾರ ರಕ್ಷಣಾ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಲಿವೆ ಎಂದು ಹೇಳಲಾಗಿದೆ.

ಚೀನಾದ ಪ್ರಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈಗ ಎರಡು ದೇಶಗಳು ಈ ಒಪ್ಪಂದಕ್ಕೆ ಮುಂದಾಗಿವೆ ಎಂದು ಹೇಳಲಾಗಿದೆ. ಈ 2+2 ಮಾತುಕತೆಯಲ್ಲಿ ಭಾರತದ ಪರ ಸುಷ್ಮಾ ಸ್ವರಾಜ್ ಮತ್ತು ನಿರ್ಮಲಾ ಸಿತಾರಮನ್ ಭಾಗವಹಿಸಿದರೆ, ಅಮೇರಿಕಾದ ಪರ  ರಕ್ಷಣಾ ಕಾರ್ಯದರ್ಶಿ ಜಿಮ್ ಮಟ್ಟಿಸ್ ರಾಜ್ಯ ಕಾರ್ಯದರ್ಶಿ ಮೈಕ್ ಪೋಮ್ಪಿಯೋ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಈ ಮಾತುಕತೆ ಎರಡು ಬಾರಿ ಮುಂದೂಡಲಾಗಿತ್ತು ,ಉಭಯದೇಶಗಳ ನಡುವಿನ ಉನ್ನತ ಮಟ್ಟದ ಮಾತುಕತೆ ಇದಾಗಿದ್ದು ಈಗ ಡ್ರೋನ್ ಗಳ ಮಾರಾಟ ಮತ್ತು ಉಪಗ್ರಹಗಳ ಡಾಟಾವನ್ನು ಕೊಡುಕೊಳ್ಳುವ ವಿಚಾರವಾಗಿ ಮಾತುಕತೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎನ್ನಲಾಗಿದೆ.

ಕಳೆದ ದಶಕದಿಂದ ಅಮೇರಿಕಾ ಮತ್ತು ಭಾರತ ಚೀನಾದ ಪ್ರಭಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಒಪ್ಪಂದಕ್ಕೆ ಮುಂದಾಗಿವೆ ಅಲ್ಲದೆ ಅದರಲ್ಲೂ ಏಷ್ಯಾದಲ್ಲಿ ಚೀನಾ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು ಈ ಹಿನ್ನಲೆಯಲ್ಲಿ ಈಗ  ಉಭಯದೇಶಗಳು ಹಲವಾರು ಅಂತರಾಷ್ಟ್ರೀಯ ವಿಷಯಗಳನ್ನು ಚರ್ಚೆ ಮಾಡಲಿವೆ ಎನ್ನಲಾಗಿದೆ.

By continuing to use the site, you agree to the use of cookies. You can find out more by clicking this link

Close