ಭಾರತ ದೇಶದೊಂದಿಗೆ ಫ್ರಾನ್ಸ್ ರಚನಾತ್ಮಕ ಮೈತ್ರಿಯನ್ನು ಬಯಸುತ್ತದೆ- ಫ್ರಾನ್ಸ್ ಅಧ್ಯಕ್ಷ

     

Updated: Mar 10, 2018 , 06:48 PM IST
ಭಾರತ ದೇಶದೊಂದಿಗೆ ಫ್ರಾನ್ಸ್ ರಚನಾತ್ಮಕ ಮೈತ್ರಿಯನ್ನು ಬಯಸುತ್ತದೆ- ಫ್ರಾನ್ಸ್ ಅಧ್ಯಕ್ಷ

ನವದೆಹಲಿ: ಭಾರತಕ್ಕೆ ನಾಲ್ಕು ದಿನಗಳ ಭೇಟಿಗಾಗಿ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮಾಕ್ರೊನ್ ದಕ್ಷಿಣ ಏಷ್ಯ ಪ್ರದೇಶದಲ್ಲಿ  ಭಾರತ ದೇಶದೊಂದಿಗೆ ಫ್ರಾನ್ಸ್ ರಚನಾತ್ಮಕ ಮೈತ್ರಿಯನ್ನು ಬಯಸುತ್ತದೆ ಎಂದು ತಿಳಿಸಿದರು.

ಇಂದು ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ವೇಳೆಯಲ್ಲಿ ಮಾತನಾಡಿದ ಇಮ್ಯಾನುವಲ್ ಮಾಕ್ರೋನ್ ಹಿಂದು ಮಹಾಸಾಗರದಲ್ಲಿನ ಸ್ಥಿರತೆ ಪ್ರಮುಖವಾದದ್ದು ಆ ನಿಟ್ಟಿನಲ್ಲಿ ಭಾರತದ ಪಾತ್ರ ಪ್ರಮುಖವಾದದ್ದು ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ "ಭಾರತ ಮತ್ತು ಫ್ರಾನ್ಸ್ ನಡುವಿನ ಮೈತ್ರಿಯು ಅದು ವಾಯು, ಜಲ, ಅಥವಾ ಬಾಹ್ಯಾಕಾಶದಲ್ಲಿ ಎರಡು ದೇಶಗಳ ಪಾಲ್ಗೊಳ್ಳುವಿಕೆಯು ಪರಸ್ಪರ  ಒಗ್ಗೂಡಿಸಿವೆ ಎಂದು ತಿಳಿಸಿದರು.

ಅನಂತರ ಎರಡು ದೇಶಗಳ ನಡುವೆ ಒಟ್ಟು 14 ಒಪ್ಪಂದಗಳಿಗೆ ಸಹಿ ಹಾಕಲಾಯಿತು.