ಇರಾಕ್: ಅಂತ್ಯಕ್ರಿಯೆಯ ಸಂದರ್ಭದಲ್ಲಿ ಬಾಂಬ್ ಸ್ಫೋಟ, 16 ಸಾವು

     

Updated: Apr 13, 2018 , 04:28 PM IST
ಇರಾಕ್: ಅಂತ್ಯಕ್ರಿಯೆಯ ಸಂದರ್ಭದಲ್ಲಿ ಬಾಂಬ್ ಸ್ಫೋಟ, 16 ಸಾವು
photo:ANI

ನವದೆಹಲಿ: ಉತ್ತರದ ಇರಾಕಿ ಗ್ರಾಮವಾದ ಸಮರ್ರಾದಲ್ಲಿನ ದಯಾಶ್ ವಿರೋಧಿ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್) ಹೋರಾಟಗಾರರ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಬಾಂಬ್ ಸ್ಪೋಟದಿಂದ  ಹದಿನಾರು ಜನರು ಮೃತಪಟ್ಟಿದ್ದಾರೆ.

ಸುದ್ದಿ ಮೂಲಗಳ  ಪ್ರಕಾರ, ಅಲ್-ಹಾಶ್ದ್ ಅಲ್-ಶಾಬಿ ಪ್ಯಾರಾ ಮಿಲಿಟರಿಯ ಘಟಕಗಳ ಐವರ ಅಂತ್ಯಕ್ರಿಯೆ ಮೆರವಣಿಗೆಯನ್ನು ನಡೆಸಲಾಗುತ್ತಿತ್ತು. ಈ ಸೈನಿಕರು ಇರಾಕಿನ ಹಲವು ಪಟ್ಟಣಗಳಲ್ಲಿ ಉಗ್ರಗಾಮಿ ಭಯೋತ್ಪಾದಕರನ್ನು  ನಾಶಮಾಡಲು 2017 ರಲ್ಲಿ  ಅಲ್ಲಿನ ಸೈನ್ಯದೊಂದಿಗೆ ಹೋರಾಡಿದರು.

ಭಯೋತ್ಪಾದಕ ಗುಂಪಿನ ಮೇಲೆ ಇರಾಕಿ ಸರ್ಕಾರವು ವಿಜಯವನ್ನು ಘೋಷಿಸಿದರೂ, ಸಹಿತ ಕದನ ಇನ್ನೂ ಹಾಗೆ ಮುಂದುವರೆದಿದೆ.

By continuing to use the site, you agree to the use of cookies. You can find out more by clicking this link

Close