ಪ್ರಧಾನಿ ಮೋದಿಗೆ ಹಿಂದಿಯಲ್ಲಿ ದೀಪಾವಳಿ ಶುಭಕೋರಿದ ಇಸ್ರೇಲ್ ಅಧ್ಯಕ್ಷ !

ಬೆಳಕಿನ ಹಬ್ಬ ದೀಪಾವಳಿ ಭಾರತೀಯರಿಗೆ ವಿಶೇಷವಾದ ಹಬ್ಬ, ಜಗತ್ತಿನ ವಿವಿಧ ಭಾಗಗಳಲ್ಲಿರುವ ಭಾರತೀಯರು ಸಂಭ್ರಮದಿಂದ ಪಟಾಕಿ ಹೊಡೆದು ಆಚರಿಸುತ್ತಾರೆ.

Last Updated : Nov 7, 2018, 12:20 PM IST
ಪ್ರಧಾನಿ ಮೋದಿಗೆ ಹಿಂದಿಯಲ್ಲಿ ದೀಪಾವಳಿ ಶುಭಕೋರಿದ ಇಸ್ರೇಲ್ ಅಧ್ಯಕ್ಷ !  title=

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಭಾರತೀಯರಿಗೆ ವಿಶೇಷವಾದ ಹಬ್ಬ, ಜಗತ್ತಿನ ವಿವಿಧ ಭಾಗಗಳಲ್ಲಿರುವ ಭಾರತೀಯರು ಸಂಭ್ರಮದಿಂದ ಪಟಾಕಿ ಹೊಡೆದು ಆಚರಿಸುತ್ತಾರೆ.

ಈ ಭಾರತೀಯರಲ್ಲಿ ಈ ಹಬ್ಬದ ಪ್ರಾಮುಖ್ಯತೆಯನ್ನು ಅರಿತುಕೊಂಡಿರುವ  ಇಸ್ರೇಲ್ ಅಧ್ಯಕ್ಷ ಬೆಂಜಮೀನ್ ನೆತಾನ್ಯಾಹು ಈಗ ವಿಶೇಷವಾಗಿ ಪ್ರಧಾನಿ ಮೋದಿ ಅವರಿಗೆ ಹಿಂದಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶುಭಕೋರಿದ್ದಾರೆ. ಟ್ವೀಟ್ ಮೂಲಕ ಶುಭ ಕೋರಿರುವ ಇಸ್ರೇಲ್ ಅಧ್ಯಕ್ಷರು"ಇಸ್ರೇಲ್ ಜನರ ಪರವಾಗಿ ನನ್ನ ಆತ್ಮೀಯ ಸ್ನೇಹಿತ ನರೇಂದ್ರ ಮೋದಿ ಮತ್ತು ಭಾರತೀಯರಿಗೆ ನಾನು ಶುಭಕೊರುತ್ತೇನೆ.ಈ ಬೆಳಕಿನ ಹಬ್ಬ ಸಂತಸ ಮತ್ತು ಸಮೃದ್ದಿಯನ್ನು ತರಲಿ.ಈ ಟ್ವೀಟ್ ಗೆ  ನೀವು ಆಚರಿಸುತ್ತಿರುವ ನಗರದ ಹೆಸರಿನ ಮೂಲಕ ಉತ್ತರಿಸಿ ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಪ್ರಧಾನಿ ಮೋದಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಸ್ರೇಲ್ ದೇಶದ ಜೊತೆ ಅವಿನಾಭಾವ ಸಂಭಂದವನ್ನು ಹೊಂದಿದ್ದಾರೆ.ಇದಕ್ಕೆ ಈಗ ಇಸ್ರೇಲ್ ಅಧ್ಯಕ್ಷ ಬೆಂಜಮೀನ್ ನೆತಾನ್ಯಾಹು ಅವರು ದೀಪಾವಳಿ ಹಬ್ಬದ ಪ್ರಯುಕ್ತ  ಟ್ವೀಟ್ ಮಾಡಿರುವುದೇ ನಿದರ್ಶನ ಎಂದು ಹೇಳಬಹುದಾಗಿದೆ.

Trending News