100ನೇ ಉಪಗ್ರಹ ಉಡಾವಣೆಯೊಂದಿಗೆ ಮತ್ತೊಂದು ದಾಖಲೆ ಬರೆದ ಇಸ್ರೋ!

ತನ್ನ 100ನೇ ಉಪಗ್ರಹವನ್ನು ಇತರ 30 ಉಪಗ್ರಹಗಳೊಂದಿಗೆ ಇಂದು ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಇಸ್ರೋ ಮತ್ತೊಂದು ದಾಖಲೆ ಬರೆದಿದೆ. 

Last Updated : Jan 12, 2018, 10:28 AM IST
100ನೇ ಉಪಗ್ರಹ ಉಡಾವಣೆಯೊಂದಿಗೆ ಮತ್ತೊಂದು ದಾಖಲೆ ಬರೆದ ಇಸ್ರೋ! title=

ನವದೆಹಲಿ : ತನ್ನ 100ನೇ ಉಪಗ್ರಹವನ್ನು ಇತರ 30 ಉಪಗ್ರಹಗಳೊಂದಿಗೆ ಇಂದು ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಇಸ್ರೋ ಮತ್ತೊಂದು ದಾಖಲೆ ಬರೆದಿದೆ. 

ಇದು ಪಿಎಸ್ ಎಲ್ ವಿ ಗೆ ಇದು 42ನೇ ಉಡಾವಣೆಯಾಗಿದ್ದು 710ಕೆಜಿ ಕಾರ್ಟೋಸ್ಯಾಟ್, ಭೂ ವೀಕ್ಷಣೆಗಾಗಿ ಎರಡು ಸರಣಿ ಉಪಗ್ರಹ, 613ಕೆ.ಜಿ. ಒಟ್ಟು ತೂಕದ 30 ಸಹ ಉಪಗ್ರಹಗಳನ್ನು ಹೊತ್ತಿರುವ ಪಿಎಸ್ ಎಲ್ ವಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿತು. 

ಇದುವರೆಗೆ ಪಿಎಸ್ಎಲ್ವಿ ಉಡಾವಣಾ ವಾಹನದ ಮೂಲಕ ಒಟ್ಟು 31 ಉಪಗ್ರಹಗಳನ್ನು ಕಕ್ಷೆಗೆ ಕಳಿಸಲಾಗಿದ್ದು ಇದರಲ್ಲಿ 28 ವಿದೇಶೀ ಉಪಗ್ರಹಗಳಾದರೆ ಮೂರು ಭಾರತೀಯ ಉಪಗ್ರಹಗಳಾಗಿವೆ.  
ಭಾರತ, ಕೆನಡಾ, ಫಿನ್​ಲ್ಯಾಂಡ್​, ಫ್ರಾನ್ಸ್, ಅಮೆರಿಕ, ಕೊರಿಯಾ, ಬ್ರಿಟನ್​ನ 31 ಉಪಗ್ರಹಗಳ ಉಡಾವಣೆ ಮೂಲಕ PSLV-C40 42ನೇ ಅಭಿಯಾನ ಆರಂಭಿಸಿದೆ. 

ಆಯ್0ಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್ (ಆಂಟ್ರಿಕ್ಸ್), ಭಾರತ ಸರ್ಕಾರದ ಅಡಿಯಲ್ಲಿನ ಬಾಹ್ಯಾಕಾಶ ಇಲಾಖೆ, ಇಸ್ರೋನ ವಾಣಿಜ್ಯ ಇಲಾಖೆ ಮತ್ತು ಅಂತರಾಷ್ಟ್ರೀಯ ಗ್ರಾಹಕರ ಅಡಿಯಲ್ಲಿರುವ ಭಾರತ ಸರ್ಕಾರದ ನಡುವಿನ ವಾಣಿಜ್ಯ ವ್ಯವಸ್ಥೆಯಾ ಭಾಗವಾಗಿ 28 ಅಂತರರಾಷ್ಟ್ರೀಯ ಗ್ರಾಹಕರ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. 

Trending News