ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಟ್ರಂಪ್ ಪುತ್ರಿ ಇವಾಂಕಾ, ನಿಕ್ಕಿ ಹ್ಯಾಲೆ ಸ್ಪರ್ಧೆ ?

ವಿಶ್ವಸಂಸ್ಥೆ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಮತ್ತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಸಲಹೆಗಾರ್ತಿ ಇವಾಂಕಾ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಸ್ಥಾನದಲ್ಲಿ ಅಲಂಕರಿಸುವುದಕ್ಕೆ ಸ್ಪರ್ಧಿಗಳಾಗಿದ್ದಾರೆ ಎಂದು ದಿ ಫೈನಾಂಷಿಯಲ್ ಟೈಮ್ಸ್ ವರದಿ ಮಾಡಿದೆ.

Last Updated : Jan 13, 2019, 02:39 PM IST
ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಟ್ರಂಪ್ ಪುತ್ರಿ ಇವಾಂಕಾ, ನಿಕ್ಕಿ ಹ್ಯಾಲೆ ಸ್ಪರ್ಧೆ ? title=

ನವದೆಹಲಿ: ವಿಶ್ವಸಂಸ್ಥೆ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಮತ್ತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಮತ್ತು ಸಲಹೆಗಾರ್ತಿ ಇವಾಂಕಾ ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಸ್ಥಾನದಲ್ಲಿ ಅಲಂಕರಿಸುವುದಕ್ಕೆ ಸ್ಪರ್ಧಿಗಳಾಗಿದ್ದಾರೆ ಎಂದು ದಿ ಫೈನಾಂಷಿಯಲ್ ಟೈಮ್ಸ್ ವರದಿ ಮಾಡಿದೆ.

ಕಿಮ್ ತನ್ನ ಎರಡನೇ ಅವಧಿ ಅಂತ್ಯಗೊಳ್ಳುವ ಮುನ್ನವೇ ತಮ್ಮ ಅಧಿಕಾರದಿಂದ ಹಿಂದೆ ಸರಿಯುವ ಕುರಿತಾಗಿ ಘೋಶಿಸಿಕೊಂಡಿದ್ದರು.ಈ ಹಿನ್ನಲೆಯಲ್ಲಿ ಈಗ ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತದೆ. ವಿಶ್ವಸಂಸ್ಥೆಯಲ್ಲಿ ಅಮೇರಿಕಾದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ಇತ್ತೀಚಿಗಷ್ಟೇ ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಅವರು ಕೂಡ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಎನ್ನಲಾಗುತ್ತಿದೆ.

ಸಂಭಾವ್ಯ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಖಜಾನೆ ಇಲಾಖೆ ತಿಳಿಸಿದೆ.ಈಗಾಗಲೇ ಈ ಅಧ್ಯಕ್ಷ ಹುದ್ದೆ ವಿಚಾರವಾಗಿ ಹಲವು ಗಮನಾರ್ಹವಾದ ಶಿಫಾರಸ್ಸುಗಳನ್ನು ಸ್ವೀಕರಿಸಿದೆ.ನಾವು ಅಮೆರಿಕದ ನಾಮನಿರ್ದೇಶನಕ್ಕಾಗಿ ಆಂತರಿಕ ವಿಮರ್ಶೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದೇವೆ. ಹೊಸ ನಾಯಕರನ್ನು ಆಯ್ಕೆ ಮಾಡಲು ನಾವು ಗವರ್ನರ್ಗಳೊಂದಿಗೆ ಕಾರ್ಯನಿರ್ವಹಿಸಲು ಎದುರು ನೋಡುತ್ತೇವೆ ಎಂದು ಖಜಾನೆ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ವಿಶ್ವಬ್ಯಾಂಕಿನ ಅತಿದೊಡ್ಡ ಷೇರುದಾರನಾಗಿರುವ ಅಮೇರಿಕ ಅಲಿಖಿತ ಒಪ್ಪಂದಡಿಯಲ್ಲಿ ಎರಡನೇ ವಿಶ್ವಯುದ್ಧದ ನಂತರ ವಿಶ್ವಬ್ಯಾಂಕ ಸ್ಥಾಪಿಸಿದಂದಿನಿಂದ  ಯಾವಾಗಲೂ ತನ್ನ ನಾಯಕನನ್ನು ಆಯ್ಕೆ ಮಾಡಿಕೊಂಡು ಬಂದಿದೆ.

Trending News