ಈ ದೇಶದಲ್ಲಿ 25 ವರ್ಷದ ವ್ಯಕ್ತಿ ಕ್ಯಾಬಿನೆಟ್ ಸಚಿವ, ಈತ ಏಷ್ಯಾದ ಕಿರಿಯ ಕ್ಯಾಬಿನೆಟ್ ಮಂತ್ರಿ

25 ನೇ ವಯಸ್ಸಿನಲ್ಲಿ ಸೈಯದ್ ಸಾದಿಕ್ ಸೈಯದ್ ಅಬ್ದುಲ್ ರಹಮಾನ್ ಅವರು ದೇಶದ ಕ್ರೀಡಾ ಸಚಿವರಾಗಿದ್ದಾರೆ. ಅದೇ ಸಮಯದಲ್ಲಿ, ಅವರು ಏಷ್ಯಾದಲ್ಲೇ ಕಿರಿಯ ವಯಸ್ಸಿನಲ್ಲಿ ಕ್ಯಾಬಿನೆಟ್ ಮಂತ್ರಿಯಾದ ಮೊದಲ ವ್ಯಕ್ತಿಯಾಗಿದ್ದಾರೆ.

Updated: Oct 8, 2018 , 05:22 PM IST
ಈ ದೇಶದಲ್ಲಿ 25 ವರ್ಷದ ವ್ಯಕ್ತಿ ಕ್ಯಾಬಿನೆಟ್ ಸಚಿವ, ಈತ ಏಷ್ಯಾದ ಕಿರಿಯ ಕ್ಯಾಬಿನೆಟ್ ಮಂತ್ರಿ

ಕೌಲಾಲಂಪುರ್: ಈ ವರ್ಷ ಮಲೇಷ್ಯಾ ಚುನಾವಣಾ ಫಲಿತಾಂಶ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ಮತ್ತೊಮ್ಮೆ ಮಹಾದಿರ್ ಮೊಹಮ್ಮದ್ ಸರ್ಕಾರ ರಚನೆಯಾಯಿತು. ಮಹಾತೀರ್ ಮೊಹಮ್ಮದ್, 93 ವರ್ಷದ ವಿಶ್ವದ ಅತ್ಯಂತ ಹಿರಿಯ(ವಯಸ್ಕ) ಅಧ್ಯಕ್ಷರಾಗಿದ್ದಾರೆ. ಈಗ ಅವರು ಕ್ಯಾಬಿನೆಟ್ನಲ್ಲಿ 25 ವರ್ಷದ ಯುವಕನಿಗೆ ತಮ್ಮ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಿದ್ದಾರೆ. 25 ನೇ ವಯಸ್ಸಿನಲ್ಲಿ ಸೈಯದ್ ಸಾದಿಕ್ ಸೈಯದ್ ಅಬ್ದುಲ್ ರಹಮಾನ್ ಅವರು ದೇಶದ ಕ್ರೀಡಾ ಸಚಿವರಾಗಿದ್ದಾರೆ. ಅದೇ ಸಮಯದಲ್ಲಿ, ಅವರು ಏಷ್ಯಾದಲ್ಲೇ ಕಿರಿಯ ವಯಸ್ಸಿನಲ್ಲಿ ಕ್ಯಾಬಿನೆಟ್ ಮಂತ್ರಿಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಅವರು ಮಲೇಷಿಯನ್ ಯುನೈಟೆಡ್ ಇಂಡಿಜೆನಿಯಸ್ ಪಕ್ಷದ ಸದಸ್ಯರಾಗಿದ್ದಾರೆ.

ಈ ಸ್ಥಾನವನ್ನು ಅಲಂಕರಿಸಿರುವ ಸೈಯದ್ ಸಾದಿಕ್ ಅವರಿಗೆ ಅತ್ಯಂತ ಹಿರಿಯ ರಾಜಕಾರಣಿ, ಪ್ರಧಾನ ಮಂತ್ರಿ ಮಹಾತೀರ್ ಮೊಹಮ್ಮದ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿದೆ. ಈ ಚುನಾವಣೆಯಲ್ಲಿ ಮಲೇಷಿಯಾದಲ್ಲಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಅವರ ಎದುರಾಳಿ ಅಭ್ಯರ್ಥಿ ಅವನನ್ನು ಬಚ್ಚಾ ಎಂದು ಚುಡಾಯಿಸಿದ್ದರು. ಅವರಿಗೆ ವಿನಮ್ರತೆಯಿಂದ ಪ್ರತಿಕ್ರಿಯಿಸಿ ಪತ್ರ ಬರೆದಿದ್ದ ಸಾದಿಕ್ ತಾವು ಯಾವಾಗಲೂ ಮಗುವಾಗಿ ಇರಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದರು.

ಮಲೇಷಿಯಾದ ಪ್ರಧಾನಿ ಮಹಾತಿರ್ ಮೊಹಮ್ಮದ್ ಅವರೊಂದಿಗೆ ಸಾದಿಕ್

ಸಾದಿಕ್ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ದೊರೆತ ಬಳಿಕ ಅವರು ಚರ್ಚಾ ವಿಷಯವಾಗಿದ್ದಾರೆ. ಜನರಲ್ಲಿ ಅವರು ಕ್ರೀಡೆ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರು ಮತದಾನದ ವಯಸ್ಸನ್ನು ಕಡಿಮೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ, ಮಲೇಷಿಯಾದ ರಾಜಕೀಯದಲ್ಲಿ, ಈ ಯುವಕನನ್ನು ದೊಡ್ಡ ದೊಡ್ಡ ನಾಯಕರು  ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ.

ತನ್ನ ದಿನಚರಿ ಬಗ್ಗೆ ವಿವರಿಸುತ್ತಾ ಸಾದಿಕ್, ಸೋಮವಾರದಿಂದ ಶುಕ್ರವಾರದವರೆಗೆ ಸರ್ಕಾರಿ ಕೆಲಸದಲ್ಲಿ ನಿರತನಾಗಿರುತ್ತೇನೆ ಎಂದು ವಿವರಿಸಿದ್ದಾರೆ. ಶುಕ್ರವಾರ ಸಂಜೆ, ಪುತ್ರಜಯದಿಂದ (ಮಲೆಷ್ಯಾದ ಆಡಳಿತಾತ್ಮಕ ರಾಜಧಾನಿ) ಎರಡು ಗಂಟೆಗಳ ಪ್ರಯಾಣವನ್ನು ನಾನು ಪಡೆಯುತ್ತಿದ್ದೇನೆ ಮತ್ತು ನನ್ನ ಕ್ಷೇತ್ರಕ್ಕೆ ತಲುಪುತ್ತೇನೆ. ಅಲ್ಲಿ ನನ್ನ ಜನರ ಸಮಸ್ಯೆಗಳನ್ನು ಕೇಳುವುದು ಮತ್ತು ಅವರ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ನನ್ನ ಆದ್ಯತೆಯಾಗಿದೆ. ನಾನು ಕೆಲವೊಮ್ಮೆ ನನ್ನ ಪ್ರದೇಶಕ್ಕೆ ಅನೇಕ ಹೂಡಿಕೆದಾರರನ್ನು ಕರೆತರುತ್ತೇನೆ, ಆದ್ದರಿಂದ ಅವರು ಅಲ್ಲಿ ಹೂಡಿಕೆ ಮಾಡುತ್ತಾರೆ ಮತ್ತು ಆ ಪ್ರದೇಶದ ಬೆಳವಣಿಗೆಯ ಭಾಗವಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ.

By continuing to use the site, you agree to the use of cookies. You can find out more by clicking this link

Close