ನೈಜೀರಿಯಾ: ಚರ್ಚ್ನಿಂದ ಹಿಂದಿರುಗುತ್ತಿದ್ದ ಜನರ ಮೇಲೆ ಗುಂಡು, 14 ಸಾವು

ಹೊಸ ವರ್ಷದ ಮುನ್ನಾದಿನದಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಚರ್ಚ್ ನಿಂದ ಹಿಂದಿರುಗುತ್ತಿದ್ದ ಜನರ ಮೇಲೆ "ರಾತ್ರಿ 12.30 ರ ಹೊತ್ತಿಗೆ ಗನ್ಮೆನ್ ಗುಂಡು ಹಾರಿಸಿದರು".

Updated: Jan 2, 2018 , 11:24 AM IST
ನೈಜೀರಿಯಾ: ಚರ್ಚ್ನಿಂದ ಹಿಂದಿರುಗುತ್ತಿದ್ದ ಜನರ ಮೇಲೆ ಗುಂಡು, 14 ಸಾವು

ವಾರಿ (ನೈಜೀರಿಯಾ): ಹೊಸ ವರ್ಷದ ಮುನ್ನಾದಿನದಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಚರ್ಚ್ ನಿಂದ ಹಿಂದಿರುಗುತ್ತಿದ್ದ ಜನರ ಮೇಲೆ "ರಾತ್ರಿ 12.30 ರ ಹೊತ್ತಿಗೆ ಗನ್ಮೆನ್ ಗುಂಡು ಹಾರಿಸಿದರು". ಈ ಗುಂಡಿನ ದಹನದ ಸಂದರ್ಭದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. 

ಡಿ.31 ರ ತಡರಾತ್ರಿ ಚರ್ಚ್ನಲ್ಲಿ ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿರುವಾಗ ರಾತ್ರಿ 12 ಗಂಟೆಗೆ ಗುಂಡಿನ ದಾಳಿ ಪ್ರಾರಂಭವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಹತ್ಯಾಕಾಂಡದ ಘಟನೆಯು ಪೋರ್ಟ್ ಹಾರ್ಕೋರ್ಟ್ನಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಓಮಕುದಲ್ಲಿ ನಡೆಯಿತು. 

ಈ ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿವರ್ಸ್ ಸ್ಟೇಟ್ ಪೋಲಿಸ್ ಪಬ್ಲಿಕ್ ರಿಲೇಶನ್ಸ್ ಆಫೀಸರ್ ನನ್ನಿಡಿ ಓಮ್ನಿ ಈ ಸಮಯದಲ್ಲಿ ಸಾವುನೋವುಗಳನ್ನು ದೃಢೀಕರಿಸಲಾಗುವುದಿಲ್ಲ ಎಂದು ತಿಳಿಸಿದರು. ಪೋಲಿಸ್ ಕಮೀಷನರ್ ಅಹ್ಮದ್ ಜಕೀ ಅವರು ಗನ್ಮನ್ಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎಂದು ಓಮ್ನಿ ತಿಳಿಸಿದರು. 

By continuing to use the site, you agree to the use of cookies. You can find out more by clicking this link

Close