VIDEO: ಪಾಕಿಸ್ತಾನಕ್ಕೆ ಕಾಶ್ಮೀರ ಅಗತ್ಯವಿಲ್ಲ- ಶಾಹಿದ್ ಅಫ್ರಿದಿ

ಪಾಕಿಸ್ತಾನ ತನ್ನ 4 ರಾಜ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದಾರೆ. 

Last Updated : Nov 14, 2018, 03:35 PM IST
VIDEO: ಪಾಕಿಸ್ತಾನಕ್ಕೆ ಕಾಶ್ಮೀರ ಅಗತ್ಯವಿಲ್ಲ- ಶಾಹಿದ್ ಅಫ್ರಿದಿ title=
File Image

ನವದೆಹಲಿ: ಸ್ಫೋಟಕ ಬ್ಯಾಟಿಂಗ್ ಮತ್ತು ವಿವಾದಾತ್ಮಕ ಹೇಳಿಕೆಗಳಿಗಾಗಿ ಹೆಸರುವಾಸಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಾಶ್ಮೀರದ ಬಗ್ಗೆ ಪಾಕಿಸ್ತಾನ ತನ್ನ ಹಕ್ಕನ್ನು ಕೈಬಿಡಬೇಕು. ಬದಲಾಗಿ, ಪಾಕ್ ತನ್ನ ನಾಲ್ಕು ರಾಜ್ಯಗಳಿಗೆ ಗಮನ ಕೊಡಬೇಕು ಎಂದು  ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಕೂಡಾ ಕ್ರಿಕೆಟಿಗರು ನಮ್ಮ ದೇಶದ ಕ್ರಿಕೆತಿಗರಂತೆಯೇ ಯಾವಾಗಲೂ ಸ್ಟಾರ್ ಆಗಿದ್ದಾರೆ. ಪ್ರಸ್ತುತ ಪ್ರಧಾನಿ ಇಮ್ರಾನ್ ಖಾನ್ ಅವರು ಮಾಜಿ ಕ್ರಿಕೆಟಿಗರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಹಿದ್ ಅಫ್ರಿದಿ ಅವರ ಮಾಜಿ ನಾಯಕ ಮತ್ತು ಪ್ರಧಾನ ಮಂತ್ರಿಯವರಿಗೆ ಕಾಶ್ಮೀರದ ಬಗ್ಗೆ ಬಹಳ ಮುಖ್ಯ ಸಲಹೆ ನೀಡಿದ್ದಾರೆ. ಲಂಡನ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ, "ಪಾಕಿಸ್ತಾನಕ್ಕೆ ಕಾಶ್ಮೀರ ಅಗತ್ಯವಿಲ್ಲ. ತನ್ನ 4 ರಾಜ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಕಾಶ್ಮೀರವನ್ನು ಮುಕ್ತ ರಾಷ್ಟ್ರವಾಗಿ ಬಿಡಲಿ" ಎಂದಿದ್ದಾರೆ.

ಇದಕ್ಕೆ ಮೊದಲು, ಶಾಹಿದ್ ಅಫ್ರಿದಿ ಈಗಾಗಲೇ ಕಾಶ್ಮೀರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ಕಾಶ್ಮೀರದಲ್ಲಿ ಜನರು ಅನಗತ್ಯವಾಗಿ ಕೊಲ್ಲಲ್ಪಡುತ್ತಿದ್ದಾರೆ" ಎಂದಿದ್ದರು.

ಶಾಹಿದ್ ಅಫ್ರಿದಿ ಮಾತ್ರವಲ್ಲ, ಪ್ರಧಾನಿಯಾಗುವುದಕ್ಕೆ ಮುಂಚಿತವಾಗಿ ಇಮ್ರಾನ್ ಖಾನ್ ಸಹ ಕಾಶ್ಮೀರ ಬಗ್ಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಭಾರತದಲ್ಲಿ ವ್ಯಾಪಕವಾಗಿ ಟೀಕಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಕಾಶ್ಮೀರ ಮತ್ತು ಭಾರತ ವಿರುದ್ಧ ಟ್ವೀಟಿಂಗ್ ಮಾಡಿದ ನಂತರ ಶಾಹಿದ್ ಅಫ್ರಿದಿ ಅವರು ಟ್ವೀಟ್ ಮಾಡಿದರು. ನಂತರ ಅವರು ಮತ್ತೊಂದು ಟ್ವೀಟ್ ಮಾಡಿದ್ದರು. ಮೊದಲು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟಿ- 20 ಸ್ಪರ್ಧೆಯಲ್ಲಿ ಭಾರತೀಯ ಆಟಗಾರರನ್ನು ಆಹ್ವಾನಿಸಬೇಕೆಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ. ಪಿಎಸ್ಎಲ್ನಲ್ಲಿ ಹೆಚ್ಚಿನ ವಿದೇಶಿ ಆಟಗಾರರನ್ನು ಕರೆದುಕೊಂಡು ದ್ವಿಪಕ್ಷೀಯ ಸರಣಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸುವಂತೆ ಆಫ್ರಿದಿ ಒತ್ತಾಯಿಸಿದ್ದರು.

Trending News