ಚೀನಾ ಜೊತೆ ಪಂಚಶೀಲ 2.0 ನೀತಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ

    

Updated: Apr 27, 2018 , 11:04 PM IST
ಚೀನಾ ಜೊತೆ ಪಂಚಶೀಲ 2.0 ನೀತಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ

ವುಹಾನ್ : ಪ್ರಧಾನಿ ನರೇಂದ್ರ ಮೋದಿಯವರು  ಶುಕ್ರವಾರದಂದು ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ  ನಿಟ್ಟಿನಲ್ಲಿ ತಮ್ಮದೇ ಆದ ಪಂಚಶೀಲ ಅಥವಾ ಐದು ಅಂಶಗಳ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೊಂದಿಗೆ ಈಸ್ಟ್ ಲೇಕ್ ಅತಿಥಿಗೃಹದಲ್ಲಿ ಉಭಯ ರಾಷ್ಟ್ರಗಳ ಸಭೆಯಲ್ಲಿ , ಪ್ರಧಾನ ಮಂತ್ರಿ ಮೋದಿ ಪಂಚಶೀಲ ತತ್ವಗಳನ್ನು ಪ್ರಸ್ತಾಪಿಸಿದರು. ಇದರಲ್ಲಿ ಪ್ರಮುಖವಾಗಿ ,ಎರಡು ಏಷ್ಯಾದ ದೈತ್ಯರ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು - ಒಮ್ಮತದ  ದೃಷ್ಟಿ,  ಗಟ್ಟಿಯಾದ ಸಂಬಂಧ, ಒಮ್ಮತದ ಪರಿಹಾರ,ಉತ್ತಮ ಸಂವಹನ ಮತ್ತು ಒಮ್ಮತದ ಚಿಂತನೆಯ ಪ್ರಕ್ರಿಯೆ.ಈ ಐದು ಅಂಶಗಳನ್ನು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಚೀನಾ ಅಧ್ಯಕ್ಷ " ಮೋದಿಯವರು  ಪ್ರಸ್ತಾಪಿಸಿದ ಐದು ತತ್ವಗಳ ಭಾರತಕ್ಕೆ ಸಹಕಾರ ನೀಡಲು ಮತ್ತು ಅದರ ಜೊತೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ ಎಂದು ತಿಳಿಸಿದರು.

1954 ರಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಚೀನಾಕ್ಕೆ ಭೇಟಿ ನೀಡಿದಾಗ, ಅವರು ಪರಸ್ಪರರ ಸಾರ್ವಭೌಮತ್ವವನ್ನು ಗೌರವಿಸಲು ಚೀನಾದ ಪ್ರಧಾನಿ ಝೌ ಎನ್ಲೈ ಅವರೊಂದಿಗೆ ಪಂಚಶೀಲ ಎಂಬ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

By continuing to use the site, you agree to the use of cookies. You can find out more by clicking this link

Close