ಅಮೆರಿಕಾದ ಸಹಕಾರ ನಿಲ್ಲಿಸಿರುವ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ-ಯುಎಸ್ಎ

    

PTI | Updated: Jan 13, 2018 , 03:55 PM IST
ಅಮೆರಿಕಾದ ಸಹಕಾರ ನಿಲ್ಲಿಸಿರುವ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ-ಯುಎಸ್ಎ

ವಾಷಿಂಗ್ಟನ್:  ಪಾಕಿಸ್ತಾನವು ಅಮೆರಿಕಾದಿಂದ ಮಿಲಿಟರಿ ಮತ್ತು ಗುಪ್ತಚರ ಸಹಕಾರವನ್ನು ಸ್ಥಗಿತಗೊಳಿಸಿರುವ ಕುರಿತು ಪಾಕಿಸ್ತಾನದಿಂದ ಯಾವುದೇ ಲಿಖಿತ ಮಾಹಿತಿ ಬಂದಿಲ್ಲ ಎಂದು ಅಮೇರಿಕಾ ತಿಳಿಸಿದೆ .

ಕಳೆದ ಕೆಲವು ದಿನಗಳ ಹಿಂದೆ ಇಸ್ಲಾಮಾಬಾದ್ನಲ್ಲಿರುವ ಪಾಕಿಸ್ತಾನಿ ಮುಖಂಡರು ಈ ವಿಷಯದಲ್ಲಿ ಹೇಳಿಕೆ ನೀಡಿರುವುದನ್ನು ಪ್ರಶ್ನಿಸಿದಾಗ, ಪಾಕಿಸ್ತಾನ ಸರಕಾರದಿಂದ ಅಮೆರಿಕಾದ ಸಹಕಾರವನ್ನು ಸ್ಥಗಿತಗೊಳಿಸುವ ಕುರಿತು  ನಾವು ಯಾವುದೇ ಔಪಚಾರಿಕ ಸಂವಹನವನ್ನು ಸ್ವೀಕರಿಸಲಿಲ್ಲ ಎಂದು ಅಮೆರಿಕಾದ ಸಿಐಎ ವಕ್ತಾರರು ತಿಳಿಸಿದ್ದಾರೆ.

ಇದೆ ಸಂದರ್ಭದಲ್ಲಿ  ಪಾಕಿಸ್ತಾನದೊಂದಿಗೆ ಬುದ್ಧಿವಂತಿಕೆಯ ಸಹಕಾರ ಕುರಿತು ಪ್ರತಿಕ್ರಿಯಿಸಲು ವಕ್ತಾರರು  ನಿರಾಕರಿಸಿದರು. ಇತ್ತೀಚಿಗೆ ಪಾಕಿಸ್ತಾನಕ್ಕೆ ಎಲ್ಲಾ ಭದ್ರತಾ ನೆರವು ಮುಕ್ತಗೊಳಿಸಲು ಟ್ರಂಪ್ ನಿರ್ಧರಿಸಿದ ನಂತರ ಅಮೇರಿಕಾ ಮತ್ತು ಪಾಕಿಸ್ತಾನದ ದ್ವಿಪಕ್ಷಿಯ ಸಂಬಂಧದಲ್ಲಿ ಬಿರುಕು ಮೂಡಿತ್ತು.

ಅಮೇರಿಕಾ ಈ ಹಿಂದೆ ಪಾಕಿಸ್ತಾನವು ತನ್ನ ಗಡಿಯೊಳಗಿನ ಭಯೋತ್ಪಾದಕ ಗುಂಪುಗಳ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು ಎಂದು ಅದಕ್ಕೆ ಹಲವು ಬಾರಿ ಮನವಿ ಮಾಡಿತ್ತು, ಆದರೆ ಇದನ್ನು ಸಮರ್ಪಕವಾಗಿ ಪಾಕಿಸ್ತಾನವು ಪಾಲಿಸದ ಹಿನ್ನಲೆಯಲ್ಲಿ ಅಮೇರಿಕಾ ಪಾಕಿಸ್ತಾನಕ್ಕೆ ನೀಡುವ ಹಣಕಾಸು ಸಹಕಾರಗಳನ್ನು ಸ್ಥಗಿತಗೊಳಿಸಿದ್ದನು ನಾವಿಲ್ಲಿ ಸ್ಮರಿಸಬಹುದು.

By continuing to use the site, you agree to the use of cookies. You can find out more by clicking this link

Close