Viral Video: ವಿಮಾನದಿಂದ ಮೀನುಗಳು ಉದುರೋದನ್ನು ನೋಡಿದ್ದಿರಾ?

ವಿಮಾನದಿಂದ ಮೀನುಗಳು ಉದುರುವುದನ್ನು ಎಂದಾದರೂ ಕಂಡಿದ್ದೀರಾ? ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ!

Updated: Sep 5, 2018 , 07:49 PM IST
Viral Video: ವಿಮಾನದಿಂದ ಮೀನುಗಳು ಉದುರೋದನ್ನು ನೋಡಿದ್ದಿರಾ?

ಸಾಮಾನ್ಯವಾಗಿ ಪ್ಯಾರಾಗ್ಲೈಡಿಂಗ್'ಗಾಗಿ ವಿಮಾನದಿಂದ ವ್ಯಕ್ತಿಗಳು ಜಿಗಿಯುವುದನ್ನು ನೋಡಿದ್ದೇವೆ. ಆದರೆ, ವಿಮಾನದಿಂದ ಮೀನುಗಳು ಉದುರುವುದನ್ನು ಎಂದಾದರೂ ಕಂಡಿದ್ದೀರಾ? ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ!

ಅಮೇರಿಕಾದ ಉಟಾಹ್ ಎಂಬ ಪರ್ವತ ಶ್ರೇಣಿಯಲ್ಲಿರುವ ಸರೋವರದ ಬಳಿ ಇಂಥ ದೃಶ್ಯ ಆಗಾಗ ಕಂಡುಬರುತ್ತದೆ. ಏಕೆಂದರೆ ಈ ಸರೋವರದಲ್ಲಿ ಮೀನುಗಳ ಸಂತತಿ ಹೆಚ್ಚಿಸುವ ಉದ್ದೇಶದಿಂದ ವಿಮಾನದಲ್ಲಿ ಮೀನುಗಳನ್ನು ತಂದು ಈ ಸರೋವರಕ್ಕೆ ಸುರಿಯಲಾಗುತ್ತದೆ. ಈ ಮೀನುಗಳ ಗಾತ್ರ ಬಹಳ ಪುಟ್ಟದಾಗಿದ್ದು, ಎಲ್ಲಾ ಸ್ಥಳಗಳಿಗೂ ಹೊಂದಿಕೊಂಡು ಬದುಕುವ ಶಕ್ತಿ ಹೊಂದಿವೆ. 

ಹೀಗೆ ಈ ಮೀನುಗಳನ್ನು ವಿಮಾನದಿಂದ ಸರೋವರಕ್ಕೆ ಸುರಿಯುವ ವೀಡಿಯೋವೊಂದನ್ನು ಉಟಾಹ್ ದ ವನ್ಯಜೀವಿ ಸಂಪನ್ಮೂಲ ವಿಭಾಗ ಟ್ವೀಟ್ ಮಾಡಿದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

By continuing to use the site, you agree to the use of cookies. You can find out more by clicking this link

Close