VIDEO: ನಿದ್ದೆಯಲ್ಲಿ ಬ್ಯಾಗ್ ಎಂದು ಭಾವಿಸಿ ಚೇರ್ ಹೊತ್ತು ಹೊರಟ ಈ ಪುಟ್ಟ ಬಾಲಕ

ನಿದ್ರೆಯು ಬಹಳ ಸಿಹಿ ವಸ್ತು ಎಂದು ಹೇಳಲಾಗುತ್ತದೆ. ನಾವು ಅಚಾನಕ್ಕಾಗಿ ನಿದ್ರೆಯಿಂದ ಎದ್ದಾಗ ನಮ್ಮ ಸ್ಥಿತಿ ಹೇಗಿರುತ್ತೆ ಹೇಳಿ...  

Last Updated : Sep 14, 2018, 10:58 AM IST
VIDEO: ನಿದ್ದೆಯಲ್ಲಿ ಬ್ಯಾಗ್ ಎಂದು ಭಾವಿಸಿ ಚೇರ್ ಹೊತ್ತು ಹೊರಟ ಈ ಪುಟ್ಟ ಬಾಲಕ title=

ನಿದ್ರೆಯು ಬಹಳ ಸಿಹಿ ವಸ್ತು ಎಂದು ಹೇಳಲಾಗುತ್ತದೆ. ನಾವು ಅಚಾನಕ್ಕಾಗಿ ನಿದ್ರೆಯಿಂದ ಎದ್ದಾಗ ನಮ್ಮ ಸ್ಥಿತಿ ಹೇಗಿರುತ್ತೆ ಹೇಳಿ... ಅದರಲ್ಲೂ ಶಾಲೆಯಲ್ಲಿ ನಿದ್ರಿಸುತ್ತಿದ್ದ ಮಗುವನ್ನು ಎಬ್ಬಿಸಿದಾಗ ಮಗುವಿನ ಸ್ಥಿತಿ ಹೇಗಿರಬೇಡ ಹೇಳಿ. ಅಂತಹ ಒಂದು ನಿದ್ರಿಸುತ್ತಿದ್ದ ಮಗುವಿನ ವಿನೋದದ ವೀಡಿಯೋ ಫೇಸ್ಬುಕ್ನಲ್ಲಿ ವೈರಲ್ ಆಗುತ್ತಿದೆ. 

ಫಿಲಿಪೈನ್ಸ್ನ ಶಾಲೆಯೊಂದರ ಈ ವಿಡಿಯೋದಲ್ಲಿ ಮಗು ಶಾಲೆಯ ಮೇಜಿನ ಮೇಲೆ ಮಲಗಿರುತ್ತದೆ. ತರಗತಿ ಮುಗಿದ ಬಳಿಕ ಶಿಕ್ಷಕರು ಮಲಗಿದ್ದ ಮಗುವನ್ನು ಎಬ್ಬಿಸುತ್ತಾರೆ. ಆಗ ತಕ್ಷ ಎಚ್ಚರಗೊಂಡ ಮಗು ತನ್ನ ಸ್ಕೂಲ್ ಬ್ಯಾಗ್ ಎಂದು ಭಾವಿಸಿ ಕುರ್ಚಿಯನ್ನು ತೆಗೆದುಕೊಂಡು ಹೋಗುತ್ತಾ ಭುಜದ ಮೇಲೆ ಇಟ್ಟುಕೊಂಡು ತರಗತಿಯಿಂದ ಹೊರನಡೆಯುತ್ತಾನೆ.

ಈ ದೃಶ್ಯವನ್ನು ನೋಡಿದ ಶಿಕ್ಷಕರು ನಗುತ್ತಾ ಮಗುವಿನ ವೀಡಿಯೊವನ್ನು ಮಾಡಿ\ ಮತ್ತು ಅದನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದರು. ಈ ವೀಡಿಯೊ ಈಗ ಫೇಸ್ಬುಕ್ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಸುಮಾರು 11 ದಶಲಕ್ಷ ಜನರು ನೋಡಿದ್ದು, ಸುಮಾರು 29 ಸಾವಿರ ಜನರು ಅದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇನ್ನು ಎರಡು ಲಕ್ಷಕ್ಕಿಂತ ಹೆಚ್ಚು ಜನರ ಇದನ್ನು ಶೇರ್ ಮಾಡಿದ್ದಾರೆ.

ಶಾಲೆ ಮುಗಿದ ಬಳಿಕ ನಡೆದ ಘಟನೆಯ ಈ ವೀಡಿಯೊವನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ. ಶಾಲೆ ಮುಗಿದ ನಂತರ, ಮಕ್ಕಳು ತರಗತಿ ಕೊಠಡಿಗಳಿಂದ ಹೊರಬರುತ್ತಾರೆ. ಒಂದು ಮಗು ಮಾತ್ರ ಶಾಲೆಯ ಮೇಜಿನ ಮೇಲೆ ನಿದ್ರಿಸುತ್ತಿರುತ್ತದೆ, ಅದರೊಂದಿಗೆ ಈ ವೀಡಿಯೊ ಪ್ರಾರಂಭವಾಗುತ್ತದೆ. ಮಗುವಿನ ಶಿಕ್ಷಕರು ಬ್ಯಾಗ್ ಒಳಗೆ ಮಗುವಿನ ಪುಸ್ತಕಗಳನ್ನೂ ಹಾಕಲು ಬ್ಯಾಗ್ ತೆಗೆದುಕೊಂಡಿರುತ್ತಾರೆ. ಅಷ್ಟರಲ್ಲಿ ನಿದ್ರೆಯಿಂದ ಎಚ್ಚರಗೊಂಡ ಮಗು ಬ್ಯಾಗ್ ಎಂದು ಭಾವಿಸಿ ಕುರ್ಚಿಯನ್ನು ಹೆಗಲ ಮೇಲೊತ್ತು ತರಗತಿಯಿಂದ ಹೊರನಡೆಯುತ್ತಾನೆ.

ನಂತರ ಶಿಕ್ಷಕರು ಮಗುವನ್ನು ಕರೆದು ಅವನ ಕೈಲಿದ್ದ ಕುರ್ಚಿಯನ್ನು ಕೆಳಗಿಡಿಸಿ, ಬ್ಯಾಗ್ ಅನ್ನು ನೀಡಿ ಕಳುಹಿಸುತ್ತಾರೆ. ಫಿಲಿಪೈನ್ಸ್ನ ಈ ವೀಡಿಯೊದಲ್ಲಿರುವ ಮಗುವಿಗೆ ಕೇವಲ 4 ವರ್ಷ ವಯಸ್ಸು ಎಂದು ಹೇಳಲಾಗುತ್ತಿದೆ.
 

Trending News