ಕಾಶ್ಮೀರ್ ಸಮಸ್ಯೆಗೆ ಯುದ್ದ ಪರಿಹಾರವಲ್ಲ - ಪಾಕ್ ಪ್ರಧಾನಿ ಇಮ್ರಾನ್ ಖಾನ್

ಕಾಶ್ಮೀರ ಸಮಸ್ಯೆಗೆ ಯುದ್ದ ಪರಿಹಾರವಲ್ಲ ಎಂದು ಪಾಕ್  ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

PTI | Updated: Dec 4, 2018 , 01:05 PM IST
 ಕಾಶ್ಮೀರ್ ಸಮಸ್ಯೆಗೆ ಯುದ್ದ ಪರಿಹಾರವಲ್ಲ - ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆಗೆ ಯುದ್ದ ಪರಿಹಾರವಲ್ಲ ಎಂದು ಪಾಕ್  ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ ಇಮ್ರಾನ್ ಖಾನ್ "ಮಾತುಕತೆ ಇಲ್ಲದೆ ಕಾಶ್ಮೀರ ಸಮಸ್ಯೆಗೆ ಇರುವ ಹಲವು ಮಾರ್ಗಗಳನ್ನು ಚರ್ಚಿಸಲು ಸಾಧ್ಯವಾಗುವುದಿಲ್ಲ ಎಂದು  ತಿಳಿಸಿದರು.ಪತ್ರಕರ್ತರು ಕಾಶ್ಮೀರ ಸಮಸ್ಯೆಗೆ ಪರಿಹಾರ ಸೂತ್ರದ ಬಗ್ಗೆ ಕೇಳಿದಾಗ ಅವರು ಇದಕ್ಕೆ ಎರಡರಿಂದ ಮೂರು ಪರಿಹಾರ ಮಾರ್ಗಗಳಿವೆ ಅವುಗಳ ಮೂಲಕ ನಾವು ಚರ್ಚಿಸಬಹುದು ಎಂದರು.

ಇಮ್ರಾನ್ ಖಾನ್ ಅವರಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಮಾಜಿ ವಿದೇಶಾಂಗ ನಟವರ್ ಸಿಂಗ್ ಅವರು ಸಮ್ಮೇಳನವೊಂದರಲ್ಲಿ ಬಿಜೆಪಿ 2004ರ ಚುನಾವಣೆಯಲ್ಲಿ ಸೋಲದೆ ಇದ್ದಲ್ಲಿ ಕಾಶ್ಮೀರ್ ವಿವಾದ ಇತ್ಯರ್ಥವಾಗುತ್ತಿತ್ತು ಎಂದು ತಿಳಿಸಿದ್ದರು .ಇದು ಕಾಶ್ಮೀರ ವಿವಾದವನ್ನು ಬಗೆಹರಿಸಲು ಎರಡು ದೇಶಗಳಿಗೆ ಪರಿಹಾರ ಮಾರ್ಗಗಳಿವೆ ಎನ್ನುವುದನ್ನು ತೋರಿಸುತ್ತದೆ ಎಂದು ಖಾನ್ ಹೇಳಿದರು.ಅಲ್ಲದೆ ವೇಳೆ ಎರಡು ದೇಶಗಳ ನಡುವಿನ ಯುದ್ದದ ಸಾಧ್ಯತೆಯನ್ನು ಅಲ್ಲಗಳೆದ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ನೆರೆಯ ಎಲ್ಲ ರಾಷ್ಟ್ರಗಳ ಜೊತೆಗೆ ಶಾಂತಿಯನ್ನು ನೆಲೆಸಲು ಪ್ರಯತ್ನಿಸುತ್ತದೆ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಇರುವುದರಿಂದ ಅದು ಈಗ ಮಾತುಕತೆ ನಡೆಸಲು ಉತ್ಸಾಹ ತೋರಿಸುತ್ತಿಲ್ಲ ಎಂದು ತಿಳಿಸಿದರು. 

   

By continuing to use the site, you agree to the use of cookies. You can find out more by clicking this link

Close