ಬೆಂಗಳೂರು: ಈಗ ದೇಶವೆಲ್ಲವು ಕೂಡ ಕರ್ನಾಟಕದ ವಿಧಾನ ಸಭಾ ಕಲಾಪವನ್ನು ಭಾರಿ ಕೂತುಹಲದಿಂದ ಎದುರು ನೋಡುತ್ತಿದೆ.  ಇಂದು ಬೆಳಗ್ಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ಸಂಜೆ ನಾಲ್ಕು ಗಂಟೆಗೆ ವಿಶ್ವಾಸ ಮತಯಾಚನೆ ಇದೆ.ಆದರೆ ಈಗ ಬಂದಿರುವ ಸುದ್ದಿ ಮೂಲಗಳ ಪ್ರಕಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಈಗ ಬಹುಮತ ವಿಶ್ವಾಸಮತ ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾದರೆ ಸದನದಲ್ಲಿ ವಿಶ್ವಾಸ ಮತಕ್ಕೂ ಮೊದಲೇ ರಾಜಿನಾಮೆ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 


ಬಹುಮತ ಸಿಗದೇ ಹೋದರೆ ಈ ಹಿಂದೆ ವಾಜಪೇಯಿ ಅವರು ಮಾಡಿದ ರೀತಿಯಲ್ಲಿಯೇ ಭಾಷಣ ಮಾಡುವ ಮೂಲಕ ಜನರ ಅನುಕಂಪ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.ಈ ಹಿನ್ನಲೆಯಲ್ಲಿ ಈಗಾಗಲೇ ಯಡಿಯೂರಪ್ಪನವರು 13 ಪುಟಗಳ ಭಾಷಣವನ್ನು ಸಿದ್ದಗೊಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 


ಬಿಜೆಪಿಗೆ ಸರ್ಕಾರ ರಚಿಸಲು ಮ್ಯಾಜಿಕ್  ಸಂಖ್ಯೆ ಕೊರತೆ ಇದೆ ಈ ಕಾರಣದಿಂದಾಗಿ ಅವರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ವಿಫಲವಾಗುತ್ತಿದೆ ಎಂದು ಹೇಳಲಾಗಿದೆ.ಈ ಹಿನ್ನಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.