close

News WrapGet Handpicked Stories from our editors directly to your mailbox

ಅಧಿಕಾರಿಗಳಿಂದ ಶ್ರೀರಾಮುಲು ಹೆಲಿಕ್ಯಾಪ್ಟರ್ ತಪಾಸಣೆ

ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದ್ದಾರೆ.

Updated: Apr 22, 2018 , 11:30 AM IST
ಅಧಿಕಾರಿಗಳಿಂದ ಶ್ರೀರಾಮುಲು ಹೆಲಿಕ್ಯಾಪ್ಟರ್ ತಪಾಸಣೆ

ಚಿತ್ರದುರ್ಗ: ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಮಾಜಿ ಸಚಿವ ಹಾಗು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದರು.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಸರ್ಕಾರಿ ಕಾಲೇಜು ಆವರಣದಲ್ಲಿರುವ ಹೆಲಿಪ್ಯಾಡ್'ನಲ್ಲಿ ಶ್ರೀರಾಮುಲು ಅವರ ಹೆಲಿಕ್ಯಾಪ್ಟರ್ ಅನ್ನು ಚುನಾವಣಾಧಿಕಾರಿಗಳು ಪರಿಶೀಲಿಸಿದರು. ಬಳಿಕ ಚಿತ್ರದುರ್ಗದಿಂದ ಚುನಾವಣಾ ಪ್ರಚಾರಕ್ಕಾಗಿ ಶ್ರೀರಾಮುಲು ಗದಗಕ್ಕೆ ತೆರಳಿದರು. 

ಗದಗ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಪ್ರಚಾರ ನಡೆಸಲಿರುವ ಶ್ರೀರಾಮುಲು ಅವರು, ರೋಡ್ ಶೋ ಕೂಡ ನಡೆಸಲಿದ್ದಾರೆ.