ವಿಜಾಪುರ: ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಮತಬೇಟೆಗಾಗಿ ವಿಜಯಪುರಕ್ಕೆ ತೆರಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಚಿವ ಎಂ.ಬಿ. ಪಾಟೀಲ್ ಟ್ವಿಟ್ಟರ್ ಮೂಲಕ ಸ್ವಾಗತ ಕೋರಿದ್ದಾರೆ. ಜತೆಗೆ ದಬ್ಬಾಳಿಕೆಯಿಂದ ಕರುನಾಡು ಹೆದರಲ್ಲ, ನಿಮ್ಮ ಮೂರು ಮುಖ್ಯಮಂತ್ರಿಗಳು ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಸವಾಲನ್ನು ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಸಚಿವ ಎಂ.ಬಿ. ಪಾಟೀಲ್, ಪ್ರಧಾನಿ ಮೋದಿಗೆ ಹೃತ್ಪೂರ್ವಕ ಸ್ವಾಗತ. ನಮ್ಮ ಸರ್ಕಾರ 3500 ಕ್ಕೂ ಹೆಚ್ಚು ಕೆರೆಗಳಿಗೆ ಯಶಸ್ವಿಯಾಗಿ ನೀರು ತುಂಬಿಸಿದೆ. ಅಷ್ಟೇ ಅಲ್ಲದೆ ನಮ್ಮ ಸರ್ಕಾರ ಲಕ್ಷಾಂತರ ಕೃಷಿ ಹೊಂಡಗಳನ್ನು ಕಟ್ಟಿದೆ. ಮಹಿಳೆಯರಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಬಸವನ ಅನುಯಾಯಿಗಳನ್ನು ಒಗ್ಗೂಡಿಸಿದೆ. ನಿಮ್ಮ ಮೂರು ಮುಖ್ಯಮಂತ್ರಿಗಳು ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್, ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದಾರೆ.



ಸಾಧ್ವಿ ಜ್ಯೋತಿ, ಯಡಿಯೂರಪ್ಪ, ಅಮಿತ ಶಾ, ಸಿಎಂ ಯೋಗಿ, ಭಾರತದ ಪ್ರಧಾನ ಮಂತ್ರಿ ತಮ್ಮ ಮತಕ್ಷೇತ್ರನ್ನು ಗುರಿಯಾಗಿಸಿಕೊಂಡಿದ್ದಾರೆ. ಇದರ ಅರ್ಥ ಏನು? ಸತ್ಯ ಉಳಿಯಲಿದೆ.  ನಾನು ಕೇವಲ ಗೆಲ್ಲುವುದಿಲ್ಲ. ಭಾರಿ ಅಂತರದಿಂದ ಗೆಲ್ಲುತ್ತೇನೆ. ದಬ್ಬಾಳಿಕೆಯಿಂದ ಕರುನಾಡು ಹೆದರುವುದಿಲ್ಲ. ಬರಮುಕ್ತ ನಾಡಿನತ್ತ, ಬಸವ ನಾಡಿನ ಚಿತ್ತ. ಸರ್ವರಿಗೂ ಸುಸ್ವಾಗತ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.