ಯಡಿಯೂರಪ್ಪ ಸ್ಥಾನದಲ್ಲಿ ನಾನಿದ್ದರೆ ಸುಪ್ರೀಂ ವಿಚಾರಣೆ ಮುಗಿಯುವವರೆಗೂ ಪ್ರಮಾಣವಚನ ಸ್ವೀಕರಿಸುತ್ತಿರಲಿಲ್ಲ: ಚಿದಂಬರಂ
ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆಗೆ ಮುಂದಾಗಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಗ್ಗೆ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.
ನವದೆಹಲಿ: "ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿರುವ ಪತ್ರದಲ್ಲಿ 104 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ಹೊಂದಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಲ್ಲದೆ, ರಾಜ್ಯಪಾಲರು ನೀಡಿರುವ ಆಹ್ವಾನದಲ್ಲೂ ಸ್ಥಾನಗಳ ಉಲ್ಲೇಖವಿಲ್ಲ. ಹಾಗಾಗಿ "ನಾನೇನಾದರೂ ಯಡಿಯೂರಪ್ಪ ಅವರ ಸ್ಥಾನದಲ್ಲಿದ್ದಿದ್ದರೆ ಮೇ 18ರಂದು ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್ ನಡೆಸಲಿರುವ ವಿಚಾರಣೆ ಮುಗಿಯುವವರೆಗೂ ಕಾಯುತ್ತಿದ್ದೆ" ಎಂದು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.
ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಶ್ರೀ ಯಡಿಯೂರಪ್ಪ ಅವರು 104 ಸಂಖ್ಯಾಬಲವನ್ನು 111 ಸಂಖ್ಯಾಬಲವನ್ನಾಗಿ ಪರಿವರ್ತಿಸಲು ರಾಜ್ಯಪಾಲರು ಅವರಿಗೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.