)
Belagavi Winter Session 2025: ಬೆಳಗಾವಿ ಅಧಿವೇಶನ ಕಳೆದೆಡು ದಿನಗಳಿಂದ ತೀವ್ರ ಕಾವು ಪಡೆದಿದೆ.ನಿನ್ನೆ ಗೃಹ ಲಕ್ಷ್ಮಿ ಯೋಜನೆಯ ತಿಕ್ಕಾಟ ಸದ್ದು ಗದ್ದಲಕ್ಕೆ ಕಾರಣವಾದ್ರೆ, ಇಂದು ದ್ವೇಷ ಭಾಷಣದ ಕಿಚ್ಚು ರೊಚ್ಚಿಗೆ ಕಾರಣ ವಾಯ್ತು.ಬಿಜೆಪಿ ನಾಯಕರನ್ನೇ ಟಾರ್ಗೆಟ್ ಮಾಡಿ ತಂದಿರುವ ಬಿಲ್ ಗೆ ತೀರ್ವ ವಿರೋಧ ವ್ಯಕ್ತವಾಯ್ತು.ಬಿಜೆಪಿ ಶಾಸಕರ ಘೋಷಣೆ ಆಕ್ರೋಶದ ಮಧ್ಯೆಯೇ ಸ್ಪೀಕರ್ ಖಾದರ್ ಬಿಲ್ ಪಾಸ್ ಮಾಡಿಬಿಟ್ರು. ಇಷ್ಟಾದ್ರೂ ಅದರ ಕಾವು ಮಾತ್ರ ಕಡಿಮೆಯಾಗ್ಲಿಲ್ಲ.
ಬೆಳಗಾವಿ ಚಳಿಗಾಲದ ಅಧಿವೇಶನ ಇಂದು ಒಂಭತ್ತನೇ ದಿನಕ್ಕೆ ಕಾಲಿಟ್ಟಿದೆ.ಇನ್ನು ಉಳಿದಿ ರೋದು ಒಂದು ದಿನ ಮಾತ್ರ ಬಾಕಿ.ಮೊದಲ ಏಳು ದಿನಗಳ ಕಾಲ ಕೇವಲ ಸಾಮಾನ್ಯ ಚರ್ಚೆಗಷ್ಟೇ ಸೀಮಿತವಾಗಿತ್ತು.ಆದ್ರೆ ನಿನ್ನೆಯಿಂದ ಸದನ ತೀರ್ವ ಗಂಭೀರ ಸ್ವರೂಪ ಪಡೆದು ಕೊಂಡಿದೆ. ನಿನ್ನೆ ಗೃಹ ಲಕ್ಷ್ಮಿ ಯೋಜನೆ ಹಾಗೂ ಹೆರಾಲ್ಡ್ ಕೇಸ್ ವಿಚಾರಗಳು ಸದ್ದುಗದ್ದಲಕ್ಕೆ ಕಾರಣವಾದ್ವು.
ಇಂದು ದ್ವೇಷ ಭಾಷಣಕ್ಕೆ ನಿಯಂತ್ರಣ ಹಾಕುವ ಬಿಲ್ ಸದನದಲ್ಲಿ ಆಕ್ರೋಶಕ್ಕೆ ಗುರಿಯಾಯ್ತು. ಕರಾವಳಿ ಭಾಗದ ಕೋಮು ದ್ವೇಷವನ್ನೇ ಗುರಿಯಾಗಿಟ್ಟು ಕೊಂಡು,ಬಿಜೆಪಿ ನಾಯಕರ ನ್ನ ಟಾರ್ಗೆಟ್ ಮಾಡಿ ತಂದಿರುವ ಬಿಲ್ಗೆ,ಬಿಜೆಪಿ ತೀರ್ವವಾಗಿಯೇ ವಿರೋಧ ವ್ಯಕ್ತಪಡಿತು.ಮೊದಮೊದಲಿಗೆ ಪರಮೇಶ್ವರ್ ಬಿಲ್ ಬಗ್ಗೆ ಸಾವಕಾಶವಾಗಿಯೇ ವಿವರಣೆ ನೀಡಿದ್ರು.ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡ ತಾಳ್ಮೆಯಿಂದಲೇ ವಿರೋಧ ವ್ಯಕ್ತಪಡಿಸ್ತಿದ್ರು.ಆದ್ರೆ ಯಾವಾಗ ಸಚಿವ ಬೈರತಿ ಸುರೇಶ್ ಕರಾವಳಿಗೆ ಬೆಂಕಿ ಹಚ್ಚೋರು ಅಂತ ಕೆಣಕಿದ್ರೋ,ಆಗ ಕರಾವಳಿ ಬಿಜೆಪಿ ನಾಯಕರು ತಿರುಗಿಬಿದ್ರು.ಇತ್ತ ಆಡಳಿತ ಪಕ್ಷದಿಂದಲೂ ತೀರ್ವ ಆಕ್ರೋಶ ಹೊರಬಿತ್ತು. ಸದನದಲ್ಲಿ ತೀವ್ರ ಸದ್ದು ಗದ್ದಲ ಶುರುವಾಯ್ತು.
ದ್ವೇಷ ಭಾಷಣದ ನಿಯಂತ್ರಣದ ಚರ್ಚೆ ವೇಳೆ ಬಿಜೆಪಿ ಶಾಸಕರು ವಿರೋಧ ಹೊರಹಾಕ್ತಿದ್ರು.ಈ ವೇಳೆ ಮಧ್ಯ ಪ್ರವೇಶಿಸಿದ ಬೈರತಿ ಸುರೇಶ್ ಕರಾವಳಿ ಭಾಗದಲ್ಲಿ ಬೆಂಕಿ ಹಚ್ಚಿದ್ರಿ ಅಂತ ಕಾಲೆಳೆದ್ರು.ಈ ವೇಳೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ರು.ಒಂದು ಹೆಜ್ಜೆ ಮುಂದೆ ಹೋದ ಶಿವಮೊಗ್ಗ ಬಿಜೆಪಿ ಶಾಸಕ ಚೆನ್ನಬಸಪ್ಪ ಚೆನ್ನಿ ಭೈರತಿ ವಿರುದ್ಧ ತಿರುಗಿಬಿದ್ರು.ಈ ವೇಳೆ ಬೈರತಿ ಸುರೇಶ್ ಕೆಂಡಾಮಂಡಲವಾದ್ರು, ಏ ನೀನು ಸುಮ್ನೆ ಕೋತ್ಕೋ ನನ್ನತ್ರ ಮಾತನಾಡಬೇಡ ಅಂತ ಚೆನ್ನಬಸಪ್ಪಗೆ ವಾರ್ನಿಂಗ್ ಕೊಟ್ರು. ಕರಾವಳಿಯವರಾಗಿ ನೀವು ಆಮಾತನ್ನಹೇಗೆ ಸಹಿಸಿಕೊಳ್ತೀರ,ಎದ್ದು ಹೊರಬನ್ನಿ ಅಂತ ಕರಾವಳಿ ಭಾಗದ ಶಾಸಕರು ಬಾವಿಗಿಳಿದ್ರು.ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.ಇದ್ರ ಮಧ್ಯೆಯೇ ಸ್ಪೀಕರ್ ಖಾದರ್ ಬಿಲ್ ಅಂಗೀಕರಿಸೋಕೆ ಅವಕಾಶ ಕೊಟ್ರು. ಗದ್ದಲದ ಮಧ್ಯೆಯೇ ಬಿಲ್ ಅಂಗೀಕಾರವಾಯ್ತು.. ಇದ್ರಿಂದ ಆಕ್ರೋಶ ಗೊಂಡ ಪ್ರತಿಪಕ್ಷ ನಾಯಕ ಆರ್.ಅಶೋಕ್ ದ್ವೇಷ ಭಾಷಣದ ಬಿಲ್ ಪ್ರತಿಯನ್ನ ಹರಿದು ಆಕ್ರೋಶ ಹೊರಹಾಕಿದ್ರು.
ಇನ್ನು ದ್ವೇಷ ಭಾಷಣದ ವಿಧೇಯಕ ಸದ್ದುಗದ್ದಲದಿಂದಾಗಿ ಪದೇ ಪದೇ ಕಲಾಪವನ್ನ ಮುಂದೂಡ ಬೇಕಾದ ಅನಿವಾರ್ಯತೆ ಸ್ಪೀಕರ್ ಗೆ ಎದುರಾಯ್ತು..ಮೊದಲಿಗೆ ಬಿಲ್ ವಿವರಣೆ ವೇಳೆ ಆದ ಗದ್ದಲಕ್ಕೆ ಕಲಾಪ ಮುಂದೂಡಬೇಕಾಯ್ತು.
ನಂತರ ಮತ್ತೆ ಪ್ರತಿಪಕ್ಷಗಳ ಚರ್ಚೆಗೆ ಬಿಗಿಪಟ್ಟು ಹಿಡಿದು ಹಿನ್ನಲೆ ಕಲಾಪ ೧೦ ನಿಮಿಷ ಮುಂದೂಡ ಲಾಯ್ತು. ಆನಂತರ ಮತ್ತೆ ಚರ್ಚೆಗೆ ಅವಕಾಶ ನೀಡೋಕೆ ಬರಲ್ಲ ಎಂದು ಸ್ಪೀಕರ್ ಹೇಳಿದ ಮೇಲೆ ಮತ್ತೆ ಮುಂದೂಡ ಬೇಕಾಯ್ತು.ಕೊನೆಗೆ ಚರ್ಚೆಗೆ ಅವಕಾಶ ನೀಡಲಿಲ್ಲವೆಂದು ಆಕ್ರೋಶ ಗೊಂಡ ಪ್ರತಿಪಕ್ಷ ನಾಯಕ ಅಶೋಕ್ ಇದು ಜನಪರವಲ್ಲದ ಸರ್ಕಾರ, ಕಾಂಗ್ರೆಸ್ ನಿಂದ ನಾವು ಏನು ಬಯಸೋಕೆ ಸಾಧ್ಯವಿಲ್ಲವೆಂದು ಹೇಳಿ ಸಭಾತ್ಯಾಗ ಮಾಡ್ತೇವೆಂದು ಘೋಷಿಸಿದ್ರು.ಬಿಜೆಪಿ, ಜೆಡಿಎಸ್ ಶಾಸಕರು ಸದನದದಿಂದ ಹೊರನಡೆದ್ರು.
ಒಟ್ನಲ್ಲಿ ದ್ವೇಷ ಭಾಷಣದ ವಿಧೇಯಕ ಚರ್ಚೆ ಅಪೂರ್ಣವಾಗಿದ್ದು ಸದನದಲ್ಲಿ ಕ್ರಮ ಬದ್ಧವಾಗಿಲ್ಲದ ವೇಳೆ ವಿಧೇಯಕ ಅಂಗೀಕಾರ ವಾಯ್ತು.ಆದ್ರೆ ಬಿಜೆಪಿ ಧರಣಿಯನ್ನು ಮುಂದುವರೆಸಿ ವಿಧೇಯಕ ಚರ್ಚಗೆ ನೀಡುವಂತೆ ಆಗ್ರಹಿಸಿದರು ಸ್ಪೀಕರ್ ಸಮ್ಮತಿಸಲಿಲ್ಲ..ಕೊನೆಗೆ ಸಭಾತ್ಯಾಗ ಮಾಡುವ ಸರ್ಕಾರದ ನಡೆಯನ್ನು ಖಂಡಿಸಿದೆ.